Bangalore, ಜನವರಿ 30 -- ಕಳೆದ ಕೆಲವು ದಿನಗಳಿಂದ ಡೀಪ್‌ಸೀಕ್‌ ಎಂಬ ಚೀನಾದ ಎಐ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಡೀಪ್‌ಸೀಕ್‌ ಎಐ ಡೌನ್‌ಲೋಡ್‌ ಮಾಡುತ್ತಿದ್ದಾರೆ. ಭಾರತೀಯರೂ ಈ ಎಐ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಟೆಸ್ಟ್‌ ಮಾಡುತ್ತಿದ್ದಾರೆ. ಚಾಟ್‌ಜಿಪಿಟಿ, ಜೆಮಿನಿ ಎಐಗಳಿಗೆ ಹೋಲಿಸಿದರೆ ಡೀಪ್‌ಸೀಕ್‌ ಸಾಕಷ್ಟು ಉತ್ತಮವಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಡೀಪ್‌ಸೀಕ್‌ ಎಐನಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುತ್ತದೆ. ಯಾಂತ್ರಿಕ ಭಾಷೆಯಂತೆ ಅಲ್ಲದೆ ಮನುಷ್ಯರಂತೆ ಹೋಗುತ್ತೆ, ಬರುತ್ತೆ ಎಂಬ ಸಹಜ ಶೈಲಿಯಲ್ಲಿ ಉತ್ತರಿಸಲು ಪ್ರಯತ್ನಿಸುತ್ತದೆ. ಇದೇ ಸಮಯದಲ್ಲಿ ಕೆಲವರು ಡೀಪ್‌ಸೀಕ್‌ ಬಳಕೆ ಸುರಕ್ಷಿತವೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ಸರಕಾರದ ಮೂಲಗಳನ್ನು ಉಲ್ಲೇಖಿಸಿ ವರದಿಯೊಂದನ್ನು ಮಾಡಿದೆ. "ಭಾರತದಲ್ಲಿ ಚೀನಾದ ಡೀಪ್‌ಸೀಕ್‌ ಎಐ ಬಳಸಲು ಸುರಕ್ಷಿತವಾಗಿದೆ" ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

"ಇದು ಭಾರತದಲ್ಲಿ ಬಳಸಲ...