ಭಾರತ, ಮಾರ್ಚ್ 12 -- Darshan Thoogudeepa: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಶೂಟಿಂಗ್‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭವಾಗಿದೆ. ಬಿಳಿ ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ ದರ್ಶನ್‌ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ತರಗೆಲೆಗಳು ಬೆಂಕಿಯಲ್ಲಿ ಧಗಧಗನೆ ಉರಿದಿವೆ. ದರ್ಶನ್‌ ಶೂಟಿಂಗ್‌ ಸ್ಥಳದಲ್ಲಿ ಇದೇನಪ್ಪ ಬೆಂಕಿ, ಹೊಗೆ ಎಂದು ಕ್ಷಣಕಾಲ ಆತಂಕ ಕಾಣಿಸಿದೆ. ಆದರೆ, ಶೂಟಿಂಗ್‌ ಸ್ಥಳದಲ್ಲಿ ಬಿದ್ದಿರುವ ತರಗೆಲೆಗಳನ್ನು ರಾಶಿ ಹಾಕಿ ಅಲ್ಲಿನ ಸಿಬ್ಬಂದಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಜನರು ನಿರಾಳವಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ಸಂಬಂಧ ಜೈಲು ಸೇರಿ ಬೇಲ್ ಮೇಲೆ ಜೈಲಿನಿಂದ ಹೊರ ಬಂದಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಇಂದಿನಿಂದ ಮೈಸೂರಿನಲ್ಲಿ ದಿ ಡೆವಿಲ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ. ರೇಣ...