Bengaluru, ಫೆಬ್ರವರಿ 16 -- Darshan Birthday: ಸ್ಯಾಂಡಲ್‌ವುಡ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬರ್ತ್‌ಡೇ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷ ತಮ್ಮ ಅಭಿಮಾನಿಗಳ ಜತೆಗೆ ಗ್ರ್ಯಾಂಡ್‌ ಆಗಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ದರ್ಶನ್‌, ಈ ವರ್ಷ ಮಾತ್ರ ಅದರಿಂದ ದೂರ ಉಳಿದಿದ್ದಾರೆ. ಅದಕ್ಕೆ ಕಾರಣ ಕರುನಾಡಿನ ಜನಕ್ಕೂ ತಿಳಿದಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಪತ್ನಿ, ಪುತ್ರನಿಂದಲೂ ಶುಭಾಶಯ ಸಂದಾಯವಾಗಿದೆ.

ಫೆ. 16ರ 1977ರಲ್ಲಿ ಹುಟ್ಟಿದ ದರ್ಶನ್‌, ಇದೀಗ ತಮ್ಮ 48ನೇ ಬರ್ತ್‌ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡಿಕೊಳ್ಳುತ್ತಿದ್ದ ದರ್ಶನ್‌, ಈ ವರ್ಷ ಆ ಸಂಭ್ರಮದಿಂದ ದೂರ ಉಳಿದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ, ಜೈಲುವಾಸ ಅನುಭವಿಸಿ ಮರಳಿದ್ದಾರೆ. ಈ ಕಾರಣದಿಂದ ಈ ಸಲದ ಸಂಭ್ರಮದಿಂದ ದೂರ ಉಳಿದಿದ್ದಾರವರು.

ಈ ಸಲದ ಬರ್ತ್‌ಡೇ...