ಭಾರತ, ಫೆಬ್ರವರಿ 13 -- ಟಾಲಿವುಡ್‌ನ ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೈ ವೋಲ್ಟೇಜ್ ಆಕ್ಷನ್ ಎಂಟರ್ಟೈನರ್ ಸಿನಿಮಾ 'ಡಾಕು ಮಹಾರಾಜ್' ಜನವರಿ 12ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಯುವ ನಿರ್ದೇಶಕ ಬಾಬಿ ಕೊಲ್ಲಿ ಮತ್ತು ಮಾಸ್ ಸಿನಿಮಾಗಳ ಬಾಪ್‌ ಎಂದೇ ಹೆಸರಾಗಿರುವ ಬಾಲಯ್ಯ ಅವರ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಪಾಸಿಟಿವ್‌ ವಿಮರ್ಶೆ ಜತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಸದ್ದು ಮಾಡಿದೆ. ಆದರೆ ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅಭಿಮಾನಿಗಳ ಕಾಯುವಿಕೆಗೆ ನಿರಾಸೆಯೊಂದೇ ಉತ್ತರವಾಗಿದೆ.

ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ಒಟಿಟಿ ಬಿಡುಗಡೆಯಾಗಿಲ್ಲ. ಅದೂ ಅಲ್ಲದೆ ಒಮ್ಮೆ ಆಸೆ, ಇನ್ನೊಮ್ಮೆ ನಿರಾಸೆ ಎಂಬಂತೆ ಫೆ 9ರಂದೇ ಈ ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ವದಂತಿ ಇತ್ತು. ಆದರೆ ಇನ್ನೂ ಈ ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಿಲ್ಲ. ಈ ಹಿಂದಿನ ಅಖಂಡ, ವೀರಸಿಂಹ ರೆಡ್...