Dakshina kannada, ಮಾರ್ಚ್ 6 -- ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಮಾಡತಡ್ಕ ಎಂಬಲ್ಲಿ ಮದ್ದು ಗುಂಡು ಶೇಖರಣೆ ಮಾಡಿಟ್ಟ ಗೋಡೌನ್ಗೆ ಸ್ಪೋಟಗೊಂಡು ಅಲ್ಲಲ್ಲಿ ಹಾನಿಯಾಗಿದೆ

ಸ್ಪೋಟದಿಂದ ಯಾರಿಗೂ ಅಪಾಯ ಸಂಭವಿಸಿಲ್ಲ ಎಂಬ ಬಗ್ಗೆ ಪ್ರಾಥಮಿಕ ವರದಿ ದೊರಕಿದ್ದು, ಇದು ಭೂಕಂಪವಲ್ಲ, ಸಣ್ಣ ಸ್ಫೋಟ. ದಯವಿಟ್ಟು ಜನರು ಯಾವುದೇ ತರದ ಭಯಪಡುವ ಅವಶ್ಯಕತೆ ಇಲ್ಲ ಎಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಕ ನಿರ್ವಹಣಾ ಸಂಸ್ಥೆ ಹೇಳಿದೆ.

ಸ್ಪೋಟದಿಂದಾಗಿ ನಾಲ್ಕೈದು ಊರುಗಳಲ್ಲಿ ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಕಿಟಕಿಗಳು ಕೆಲವೆಡೆ ಮುರಿದಿವೆ.

ಸ್ಪೋಟದ ಪ್ರಮಾಣ ಹೇಗಿತ್ತೆಂದರೆ ಹಲವು ಕಡೆಗಳಲ್ಲಿ ಮನೆಯ ಮೇಲ್ಛಾವಣಿಗಳಲ್ಲೂ ಬಿರುಕು ಬಿಟ್ಟಿದೆ.

ಹಲವಾರು ಮನೆಗಳಲ್ಲಿ ಮೇಲ್ಛಾವಣಿಯ ಭಾಗವೇ ಮುರಿದು ಹೋಗಿವೆ. ಕೆಲವು ಕಡೆಗಳಲ್ಲಿ ಮುರಿದು ಹಾರಿ ಬಿದ್ದಿವೆ, ಇದರಿಂದಲೇ ಜನ ಭೂಕಂಪ ಆಗಿರಬೇಕು ಎನ್ನುವ ಆತಂಕ ವ್ಯಕ್ತಪಡಿಸಿದ್ದರು.

ಮನೆಗಳಲ್ಲಿ ಏಕಾಏಕಿ ನಡುಗಿದ ಅನುಭವವೂ ಆಗಿದೆ...