Dakshina kannada, ಮಾರ್ಚ್ 19 -- Dakshina Kannada News: ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ, ಹಿಮ್ಮೇಳ ಮತ್ತು ಮುಮ್ಮೆಳದ ವಿಶಿಷ್ಟ ಸಾಧಕರಾಗಿ ಗುರುತಿಸಿಕೊಂಡಿದ್ದ ಬಿ. ಗೋಪಾಲಕೃಷ್ಣ ಕುರುಪ್ (90) ಅವರು ನಿಧನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಅರಸಿನಮಕ್ಕಿಯ ಬರ್ಗುಳ ನಿವಾಸಿಯಾಗಿದ್ದ ಅವರು, ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದ ಕಲಾವಿದರಾಗಿದ್ದರು. ಕರ್ನಾಟಕ ಹಾಗೂ ಕೇರಳ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಕುರುಪ್, ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ನಾಟ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಚೆಂಡೆ ವಾದನ ಹಾಗೂ ಮದ್ದಳೆ ವಾದನ ಕ್ರಮದ ಕುರಿತಾಗಿ ಪಠ್ಯ ರಚಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ರಾಜ್ಯ ಗುರುಪೂಜಾ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಲಭಿಸಿದ್ದವು.

ಯಕ್ಷಗಾನ ರಂಗದಲ್ಲಿ ಅಪಾರ ಶಿಷ್ಯಬಳಗ ಮತ್ತು ಅಭಿಮಾನಿಗಳನ್ನು ಹೊಂದಿದ್ದ ಅವರು, ಈ ಕಲೆಗೆ ಮಹತ...