Dakshina kannada, ಮಾರ್ಚ್ 28 -- Dakshina Kannada Home Stay: ಕಳೆದ ವರ್ಷ ನವೆಂಬರ್ ನಲ್ಲಿ ಮಂಗಳೂರು ಹೊರವಲಯದ ಹೋಂ ಸ್ಟೇ ಒಂದರಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣದ ಬಳಿಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೋಂ ಸ್ಟೇಗಳ ಮೇಲೆ ಕಟ್ಟುನಿಟ್ಟಿನ ನಿಗಾವನ್ನು ಪ್ರವಾಸೋದ್ಯಮ ಇಲಾಖೆ ಇರಿಸಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ತಪಾಸಣೆ ನಡೆಸಿ, ಅನಧಿಕೃತ ಹೋಂ ಸ್ಟೇಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖೆ ಪ್ರಕಾರ, ಅನಧಿಕೃತ ರೆಸಾರ್ಟ್ ಗಳು ಇಲ್ಲ. ಆದರೆ ಇರುವ ರೆಸಾರ್ಟ್ ಗಳು ಮಾನದಂಡ ಪ್ರಕಾರ ಕಾರ್ಯಾಚರಣೆ ನಡೆಸುತ್ತಿದೆಯೇ ಎಂಬುದನ್ನು ತಪಾಸಣೆ ಮಾಡಬೇಕಾಗಿರುವುದು ಇಲಾಖೆ ಮುಂದಿರುವ ದೊಡ್ಡ ಸವಾಲು. ಬೇಸಿಗೆ ಸಂದರ್ಭ ಕಡಲತೀರದ ಹೋಂ ಸ್ಟೇಗಳಿಗೆ ಈಗ ಭಾರೀ ಬೇಡಿಕೆ ಇದೆ. ಈ ವೇಳೆಯೇ ತಪಾಸಣೆ ಚಟುವಟಿಕೆಯೂ ಚುರುಕಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಕಣ್ಗಾವಲು ಇರಿಸಿದೆ.

ಕರಾವಳಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ, ಕಾಡುಗಳ ಜತೆಗೆ ದೇಗುಲ ದರ್ಶನವು ಪ್ರಸಿದ್ದಿ.ಕರ್ನಾಟಕದ ನಾನಾ ಭಾಗಗಳಿ...