ಭಾರತ, ಏಪ್ರಿಲ್ 6 -- ಮಂಗಳೂರು: ಯುವಕರು ಹೆದ್ದಾರಿಯಲ್ಲಿ ಕಾರಿನ ಮೇಲೆ ಕುಳಿತು ಹುಚ್ಚಾಟ ಮೆರೆಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿರುವ ಕಾರಿನ ಮೇಲ್ಭಾಗ ತೆರೆದುಕೊಂಡಿದ್ದು, ಆ ಭಾಗದಿಂದ ಇಬ್ಬರು ಯುವಕರು ಮೇಲೆ ಬಂದಿದ್ದು, ಇಬ್ಬರು ಹಿಂದಿನ ಸೀಟಿನ ಎಡ ಮತ್ತು ಬಲಬದಿಯ ಬಾಗಿಲಿನಿಂದ ಮೇಲೆ ಬಂದಿದ್ದು, ಇಬ್ಬರು ಮುಂದಿನ ಭಾಗದಿಂದ ಮೇಲೆದ್ದು ನಿಂತು ಹುಚ್ಚಾಟ ಮೆರೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಯುವಕರ ಕೃತ್ಯವನ್ನು ಹಿಂದಿನಿಂದ ಕಾರಿನಲ್ಲಿ ಬರುತ್ತಿರುವವರು ಚಿತ್ರೀಕರಿಸಿಕೊಂಡಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ತನಿಯಮನೆ ನಿವಾಸಿ ಜೀವನ್ ತಾವ್ರೊ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆ ಸಿಬಂದಿ ಬಂಧಿಸಿದ್ದಾರೆ.

ಕುರ...