Bengaluru, ಫೆಬ್ರವರಿ 16 -- Daaku Maharaaj OTT: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್‌ ಸಿನಿಮಾ, ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಬಿಡುಗಡೆ ಆಗಿದ್ದ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. ಇಂತಿಪ್ಪ ಸಿನಿಮಾ ಒಟಿಟಿಗೆ ಅದ್ಯಾವಾಗ ಬರಲಿದೆ ಎಂದು ಒಟಿಟಿ ವೀಕ್ಷಕರು ಕಾದಿದ್ದರು. ಆದರೆ, ಅಧಿಕೃತ ದಿನಾಂಕ ಮಾತ್ರ ಘೋಷಣೆ ಆಗಿರಲಿಲ್ಲ. ಇದೀಗ ಇದೇ ಚಿತ್ರದ ಅಫಿಶಿಯಲ್‌ ಒಟಿಟಿ ಬಿಡುಗಡೆ ಡೇಟ್‌ ಘೋಷಣೆ ಆಗಿದೆ.

ಕಮರ್ಶಿಯಲ್‌ ಆಕ್ಷನ್‌ ಸಿನಿಮಾ ಫೆಬ್ರವರಿ 21ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ನೆಟ್‌ಫ್ಲಿಕ್ಸ್‌ ಒಟಿಟಿ ಈ ವಿಚಾರವನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಚಿತ್ರದ ಒಟಿಟಿ ಬಿಡುಗಡೆಗೆ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಡಾಕು ಮಹಾರಾಜ್ ಚಿತ್ರವನ್ನು ಬಾಬಿ ನಿರ್ದೇಶಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಮತ್ತ...