ಭಾರತ, ಫೆಬ್ರವರಿ 21 -- ತೆಲುಗಿನ ಡಾಕು ಮಹಾರಾಜ್‌ ಸಿನಿಮಾ ಜನವರಿ 18ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 100 ಕೋಟಿಯಷ್ಟು ಗಳಿಕೆ ಕಂಡಿದೆ. ಬಾಬಿ ಡಿಯೋಲ್‌, ಉರ್ವಶಿ ರೌಟೆಲಾ ಮುಂತಾದ ಬಾಲಿವುಡ್ ದಿಗ್ಗಜರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಇಂದು (ಫೆಬ್ರುವರಿ 21) ಬಿಡುಗಡೆಯಾಗುತ್ತಿದೆ.

ಇದೀಗ ಸಿನಿಮಾದ ಕೆಲವು ದೃಶ್ಯಗಳಿಗೆ ಒಟಿಟಿಯಲ್ಲಿ ಕತ್ತರಿ ಹಾಕಲಾಗಿದೆ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಅಷ್ಟೇ ಅಲ್ಲದೆ ಊರ್ವಶಿ ರೌಟೆಲಾ ಅಭಿಮಾನಿಗಳು ಈ ವಿಚಾರದಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡಾಕು ಮಹಾರಾಜ್ ಹಾಗೂ ಊರ್ವಶಿ ರೌಟೆಲಾ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಡಾಕು ಮಹಾರಾಜ್ ಚಿತ್ರದ ಪೋಸ್ಟರ್‌ನಲ್ಲಿ ಊರ್ವಶಿ ರೌಟೆಲಾ ಚಿತ್ರ ಇರಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಚರ್ಚೆಯನ್ನು ಹುಟ್ಟುಹಾಕಿತ್ತು. ಸಿನಿಮಾ ಪ್ರಚಾರಕ್ಕಾಗಿ ಸಾಕಷ್ಟು ಶ್ರಮಿಸಿದ ನಂತರವೂ ಊರ್ವಶಿಗ...