Bangalore, ಮಾರ್ಚ್ 11 -- Crime Thriller OTT: ಮಲಯಾಳಂ ನಟರಾದ ಧ್ಯಾನ್ ಶ್ರೀನಿವಾಸನ್ ಮತ್ತು ಸನ್ನಿ ವೇಯ್ನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ತ್ರಯಂ' ಸಿನಿಮಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಕ್ರೈಮ್ ಥ್ರಿಲ್ಲರ್ ಚಿತ್ರವನ್ನು ಸಂಜಿತ್ ಚಂದ್ರಸೇನನ್ ನಿರ್ದೇಶಿಸಿದ್ದಾರೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಈಗ ತ್ರಯಂ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಈ ತ್ರಯಂ ಸಿನಿಮಾವು ಇಂದು (ಮಾರ್ಚ್ 11) ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ಇದರ ಧ್ವನಿ ಕೇಳಿಸದು. ಇಂಗ್ಲಿಷ್ ಸಬ್‌ ಟೈಟಲ್‌ಗಳು ಲಭ್ಯ ಇವೆ.

ತ್ರಯಂ ಸಿನಿಮಾ ಕಳೆದ ವರ್ಷ ಅಕ್ಟೋಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ನಿರೀಕ್ಷೆಯಂತೆ ಪ್ರದರ್ಶನ ಕಾಣಲಿಲ್ಲ. ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಕಲೆಕ್ಷನ್ ಕೂಡ ನಿರಾಶಾದಾಯಕವಾಗಿತ್ತು...