ಭಾರತ, ಏಪ್ರಿಲ್ 6 -- ಹಲವು ವರ್ಷಗಳಿಂದ ಪತ್ನಿಯ ಮೇಲೆ ಅನುಮಾನ ಹಾಗೂ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಚಿಕ್ಕತೊಗೂರಿನ ಸಾರ್ವಜನಿಕ ರಸ್ತೆಯಲ್ಲಿ 43 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಾಗೇಪಲ್ಲಿಯ ದಿನಗೂಲಿ ಕೆಲಸಗಾರ ಕೃಷ್ಣಪ್ಪ ಅಲಿಯಾಸ್ ಕೃಷ್ಣ ಎಂಬ ಆರೋಪಿ ತನ್ನ ಪತ್ನಿ ಕೆ. ಶಾರದಾ (38) ಮೇಲೆ ಹೊಂಚು ಹಾಕಿ, ಚಾಕುವಿನಿಂದ ಕುತ್ತಿಗೆಗೆ ಹಲವು ಬಾರಿ ಇರಿದಿದ್ದಾನೆ.

ಚಾಜು ಇರಿದ ತಕ್ಷಣ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಶಾರದಾ ಮನೆಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಅವಳ ಗಂಡನೇ ಅವಳನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಪೊಲೀಸರ ಪ್ರಕಾರ, ಕೃಷ್ಣಪ್ಪ ಶಾರದಾಳ ಶೀಲದ ಬಗ್ಗೆ ವರ್ಷಗಳಿಂದ ಅನುಮಾನಗಳನ್ನು ಹೊಂದಿದ್ದರು, ಇದು ಸುಮಾರು ನಾಲ್ಕು ವರ್ಷಗಳ ಹಿಂದೆ ಅವರ ಬೇರ್ಪಡುವಿಕೆಗೆ ಕಾರಣವಾಗಿತ್ತು ಎಂದು ...