ಭಾರತ, ಏಪ್ರಿಲ್ 5 -- Coolie Release Date: ಸೂಪರ್‌ ಸ್ಟಾರ್‌ ರಜನಿಕಾಂತ್ ಅಭಿನಯದ, ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು 2025 ಆಗಸ್ಟ್ 14ಕ್ಕೆ ಬಿಡುಗಡೆಯಾಗಲಿದೆ. ಆದರೆ ಈ ಸಿನಿಮಾವು ಅಯಾನ್ ಮುಖರ್ಜಿ ಅವರ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ 'ವಾರ್ 2'ದ ಜೊತೆ ಪೈಪೋಟಿ ನಡೆಸಲಿದೆ. ವಾರ್ 2 ಸಿನಿಮಾ ಕೂಡ ಅದೇ ದಿನ ಬಿಡುಗಡೆಯಾಗಲಿದೆ. ಇದೀಗ ಎರಡು ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಯಾವ ಸಿನಿಮಾ ಗೆಲ್ಲಬಹುದು ಎನ್ನುವ ಚರ್ಚೆ ಹುಟ್ಟು ಹಾಕುವಂತೆ ಮಾಡಿದೆ. ಈ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಸಲಾರ್ ಹಾಗೂ ಡಂಕಿ ಬಿಡುಗಡೆಯನ್ನು ನೆನಪಿಸಿದೆ. ಅಲ್ಲದೇ ಸಿನಿ ಪ್ರೇಮಿಗಳು ಇದು ಸಲಾರ್ vs ಡಂಕಿ ಆಗಲಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಮಾರ್ಚ್ 4 ಶುಕ್ರವಾರ ಕೂಲಿ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿತು. ಆಗಸ್ಟ್ 14 ರಂದು ಕೂಲಿ ವಿಶ್ವದಾದ್ಯಂತ ಬಿಡುಗಡೆ ಸಿನಿಮಾ ತಂಡ ಸ...