Bengaluru, ಮಾರ್ಚ್ 31 -- ಭಾರತದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ವ್ಯಾಸಾಂಗ ಮಾಡುವಾಗ ಹೆಚ್ಚಿನ ವಿದ್ಯಾರ್ಥಿಗಳು ವಾಣಿಜ್ಯ (ಕಾಮರ್ಸ್) ವಿಭಾಗವನ್ನು ಆಯ್ಕೆ ಮಾಡುತ್ತಾರೆ. ವಾಣಿಜ್ಯ ವಿಭಾಗವು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ವೃತ್ತಿ ಆಯ್ಕೆಗಳನ್ನು ಹೊಂದಿದೆ. ಕಲಾ ವಿದ್ಯಾರ್ಥಿಗಳಿಗಿಂತ ವಾಣಿಜ್ಯ ವಿದ್ಯಾರ್ಥಿಗಳು ಹೊಂದಿರುವ ಪ್ರಮುಖ ಪ್ರಯೋಜನವೆಂದರೆ, ವಾಣಿಜ್ಯ ಮತ್ತು ಕಲಾ ಕೋರ್ಸ್‌ಗಳೆರಡಕ್ಕೂ ಅರ್ಹರು. ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಪೂರೈಸಿದವರು ಮುಂದೇನು ಎಂದು ಯೋಚಿಸುತ್ತಿರಬಹುದು. ಇವರಿಗಾಗಿ ಅನೇಕ ಆಯ್ಕೆಗಳಿವೆ. ಪಿಯುಸಿ ನಂತರ ವಾಣಿಜ್ಯ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕೋರ್ಸ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ವಾಣಿಜ್ಯ ಪದವಿ ಅಥವಾ ಬಿಕಾಂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಜನಪ್ರಿಯ ಕೋರ್ಸ್ ಆಗಿದೆ. ಈ ಕೋರ್ಸ್ ಅನ್ನು ಮುಖ್ಯವಾಗಿ ಬಿಕಾಂ ಆನರ್ಸ್ ಮತ್ತು ಬಿಕಾಂ ಜನರಲ್ ಆಗಿ ನೀಡಲಾಗುತ್ತದೆ. ವಾಣಿಜ್ಯ ವಿಭಾಗದಲ್ಲಿ, ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್ ಮತ್ತು ಅರ...