Bangalore, ಏಪ್ರಿಲ್ 4 -- ಖುಷಿ ಕಪೂರ್, ಜುನೈದ್ ಖಾನ್ ನಟಿಸಿದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಲವ್‌ಯಾಪ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 2 ತಿಂಗಳ ಬಳಿಕ ಇದೀಗ ಲವ್‌ಯಾಪ ಎಂಬ ಕಾಮಿಡಿ ರೊಮ್ಯಾಂಟಿಕ್ ಸಿನಿಮಾ ಜಿಯೋಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಿದೆ.
ಅದ್ವೈತ್ ಚಂದನ್ ನಿರ್ದೇಶನದ ಲವ್‌ಯಾಪ ಸಿನಿಮಾವು ತಮಿಳು ಚಿತ್ರ ಆಧರಿತ. ಅಂದರೆ, 2022ರ ತಮಿಳು ಸಿನಿಮಾ ಲವ್ ಟುಡೇ ಯ ಬಾಲಿವುಡ್ ರೂಪಾಂತರ ಇದಾಗಿದೆ. ಯುವ ಜೋಡಿಯು ತಮ್ಮ ಮದುವೆಗೆ ಮುನ್ನ ಫೋನ್ ಅದಲುಬದಲು ಮಾಡಿಕೊಂಡು ಪ್ರೇಮ ಪರೀಕ್ಷೆ ಮಾಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಲವ್‌ಯಾಪ ಸಿನಿಮಾದಲ್ಲಿ ಬಾನಿ ಮತ್ತು ಗೌರವ್ ಪ್ರಣಯವಿದೆ. ಹಲವಾರು ಜೆನ್-ಝಡ್ ದಂಪತಿಯಂತೆ ಇವರಿಬ್ಬರು ಆಳವಾದ ಪ್ರೀತಿ ಹೊಂದಿದ್ದರೂ, ಇವರಿಬ್ಬರೂ ತಮ್ಮ ಫೋನ್ ಬಿಟ್ಟಿರಲು ಬಯಸುವುದಿಲ್ಲ. ಇದು ಇವರ ಸಂಬಂಧದಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಒಂದು ದಿನ ರಾತ್ರಿ ಇಬ್ಬರೂ ತಮ್ಮ ಫೋನ್‌ಗಳನ್ನು ಅದಲುಬದಲು ಮಾಡಿಕೊಳ್ಳುವ ಸವಾಲು ಎದುರಾಗ...
Click here to read full article from source
To read the full article or to get the complete feed from this publication, please
Contact Us.