Bangalore, ಮಾರ್ಚ್ 17 -- Comedy Movie OTT: ಹಾಸ್ಯ ಸಿನಿಮಾ ಇಷ್ಟಪಡುವವರಿಗೆ, ವಿಶೇಷವಾಗಿ ತೆಲುಗಿನ ಬ್ರಹ್ಮಾನಂದಂ ಕಾಮಿಡಿ ಇಷ್ಟಪಡುವವರಿಗೆ ಈ ವಾರ ಬ್ರಹ್ಮ ಆನಂದಂ ಎಂಬ ಸಿನಿಮಾ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಬ್ರಹ್ಮಾನಂದಂ ಮತ್ತು ಅವರ ಮಗ ರಾಜ ಗೌತಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾ ಮಾರ್ಚ್ 20 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಬ್ರಹ್ಮ ಆನಂದಂ ಚಿತ್ರವು ವಿವಿಧ ಕಾರಣಗಳಿಗಾಗಿ ವಿಶೇಷ ಚಿತ್ರವಾಗಿದೆ. ಹಿರಿಯ ಹಾಸ್ಯನಟ ಬ್ರಹ್ಮಾನಂದಂ ಮತ್ತು ಅವರ ಮಗ ರಾಜ್ ಗೌತಮ್ ಜತೆಯಾಗಿ ನಟಿಸಿದ ಸಿನಿಮಾ ದಾಗಿದೆ. ಈ ಚಿತ್ರವನ್ನು ಆರ್‌ವಿಎಸ್ ನಿಖಿಲ್ ನಿರ್ದೇಶಿಸಿದ್ದಾರೆ. ದೊಡ್ಡಮಟ್ಟದ ಪ್ರಚಾರವಿದ್ದರೂ ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ.

ಈ ಬ್ರಹ್ಮ ಆನಂದಂ ಸಿನಿಮಾದ ಒಟಿಟಿ ಹಕ್ಕುಗಳನ್ನು ಆಕರ್ಷಕ ಬೆಲೆಗೆ ಆಹಾ ...