Benglaluru, ಫೆಬ್ರವರಿ 19 -- Bottle Radha OTT release: ಬಾಟಲ್‌ ರಾಧಾ ಎಂಬ ತಮಿಳು ಸಿನಿಮಾ ಇದೇ ಫೆಬ್ರವರಿ 21ರಂದು ಆಹಾ ತಮಿಳು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಇದು ಕುಡುಕರು ತಪ್ಪದೇ ನೋಡಬೇಕಾದ ಸಿನಿಮಾ. ಕುಡುಕರ ಅವಾಂತರ, ಕುಡುಕರ ಬದುಕನ್ನು ನೋಡಲು ಬಯಸುವ ಇತರರೂ ನೋಡಬಹುದು. ಸಾಕಷ್ಟು ಕಾಮಿಡಿ ಹೊಂದಿರುವ ಈ ಸಿನಿಮಾ ಇದೇ ಶುಕ್ರವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಕುರಿತು ಯಾವುದೇ ಮಾಹಿತಿ ಇಲ್ಲ.

ಗುರು ಸೋಮಸುಂದರಂ ಅವರ 'ಬಾಟಲ್ ರಾಧಾ' ಚಿತ್ರವು ಜನವರಿ 24, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ದಿನಕರನ್ ಶಿವಲಿಂಗಂ ಬರೆದು ನಿರ್ದೇಶಿಸಿದ ಈ ಚಿತ್ರವು ಮದ್ಯಪಾನದ ತೊಂದರೆಗಳನ್ನೂ ತಿಳಿಸಿತ್ತು. ಈ ಸಿನಿಮಾ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ, ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಗಳಿಕೆ ಮಾಡುವಲ್ಲಿ ವಿಫಲವಾಗಿತ್ತು. ಇದೀಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಾಗುವ ಮುನ್ನವೇ ಈ ಸಿನಿಮಾವು ಫೆಬ್ರವರಿ 21ರಂದು ಆಹಾ ತಮಿಳು ಒಟಿಟಿಯಲ...