Bengaluru, ಫೆಬ್ರವರಿ 28 -- Colors Kannada Serials TRP: ಕನ್ನಡ ಕಿರುತೆರೆಯ ಏಳನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಈ ಟಿಆರ್‌ಪಿ ಲಿಸ್ಟ್‌ನಲ್ಲಿ ಜೀ ಕನ್ನಡದ ಸೀರಿಯಲ್‌ಗಳೇ ಎಂದಿನಂತೆ ಮುಂದಿವೆ. ಆರನೇ ವಾರಕ್ಕೆ ಹೋಲಿಕೆ ಮಾಡಿದರೆ, ಕಲರ್ಸ್‌ ಕನ್ನಡದ ಧಾರಾವಾಹಿಗಳು ಕೊಂಚ ಏರಿಕೆ ಕಂಡಿವೆ. ಪ್ರಮುಖ ಧಾರಾವಾಹಿಗಳೇ ಏಳನೇ ವಾರ ಕೈ ಹಿಡಿದಿವೆ. ಕಲರ್ಸ್‌ನ ಹಳೇ ಸೀರಿಯಲ್‌ಗಳಾದ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಮತ್ತು ರಾಮಾಚಾರಿ ಸೀರಿಯಲ್‌ಗಳೇ ಹೊಸ ಧಾರಾವಾಹಿಗಳಿಗೆ ಹೋಲಿಸಿದರೆ, ಮುಂದೆ ಇವೆ. ಹಾಗಾದರೆ, ಕಲರ್ಸ್‌ನ ಎಲ್ಲ ಸೀರಿಯಲ್‌ಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಕರಿಮಣಿ, ದೃಷ್ಟಿಬೊಟ್ಟು, ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ನಿನಗಾಗಿ, ನೂರು ಜನ್ಮಕೂ, ರಾಮಾಚಾರಿ, ವಧು, ಯಜಮಾನ ಈ ಒಂಬತ್ತು ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್‌ ಇದೀಗ ಹೊರಬಿದ್ದಿದೆ. ಆ ಎಲ್ಲ 9 ಸೀರಿಯಲ್‌ಗಳ ಟಿಆರ್‌ಪಿ ಲೆಕ್ಕಾಚಾರದಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ ಅತಿ ಹೆ...