ಭಾರತ, ಫೆಬ್ರವರಿ 28 -- ಸಾಹಿತ್ಯ ಇಷ್ಟವಿಲ್ಲದೆ ಇದ್ದರೂ ಕರ್ಣನನ್ನು ಮದುವೆ ಆಗುವ ಪ್ರಸಂಗ ಎದುರಾಯ್ತು, ಆ ಕಾರಣಕ್ಕಾಗಿ ಅವಳಿಗೆ ತುಂಬಾ ಬೇಸರವಿದೆ.

ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ ತುಳಸಿ ಪೂಜೆ ಮಾಡುತ್ತಾಳೆ. ತುಳಸಿ ಪೂಜೆ ಮಾಡಿ ಬಂದ ನಂತರ ದೇವರ ಮನೆಗೆ ಹೋಗುತ್ತಾಳೆ.

ದೇವರ ಪೂಜೆ ಮಾಡಿದ್ದಾಳೆ. ಸತ್ಯವನ್ನು ಮತ್ತೆ ಸುಳ್ಳಾಗಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಾಹಿತ್ಯ ಹೊಂದಿಕೊಂಡು ಬದುಕಲು ನಿರ್ಧಾರ ಮಾಡಿದಂತಿದೆ.

ಮನೆಯವರೆಲ್ಲ ಸಾಹಿತ್ಯ ಬೇಗನೆ ಎದ್ದು ಎಲ್ಲ ಕೆಲಸ ಮಾಡುವುದನ್ನು ನೋಡಿ ಆಶ್ಚರ್ಯ ಆಗುತ್ತದೆ.

ಇದ್ಯಾವುದೂ ಇನ್ನು ಮೇಲೆ ಸರಿ ಆಗೋದೇ ಇಲ್ಲ. ನೀನು ಯಾರನ್ನೂ ಒಪ್ಪಿಕೊಳ್ಳೋದಿಲ್ಲ ಎಂದು ನಾವೆಲ್ಲ ಅಂದುಕೊಂಡಿದ್ವಿ ಎಂದು ಹೇಳುತ್ತಾರೆ.

ಆಗ ಸಾಹಿತ್ಯ ನಾನು ಈಗಲೂ ಅದೇ ಮನಸ್ಥಿತಿಯಲ್ಲಿದ್ದೀನಿ ಎಂದು ಉತ್ತರಿಸುತ್ತಾಳೆ. ಅದನ್ನು ಕೇಳಿ ಮತ್ತೆ ಎಲ್ಲರಿಗೂ ಬೇಸರ ಆಗುತ್ತದೆ.

ಕರ್ಣ ಮಾಡಿದ ತಪ್ಪನ್ನು ನಾನು ಎಂದಿಗೂ ಕ್ಷಮಿಸೋದಿಲ್ಲ ಎಂದು ಸಾಹಿತ್ಯ ಹೇಳಿದ್ದಾಳೆ.

Published by HT Digital Conte...