ಭಾರತ, ಫೆಬ್ರವರಿ 27 -- ಸಾಹಿತ್ಯಾ ತಾನು ಮದುವೆ ಆಗಿರೋದೇ ದೊಡ್ಡ ತಪ್ಪು ಎಂದು ಅಳುತ್ತಾ ಇದ್ದಾಳೆ. ಅದೂ ಅಲ್ಲದೇ ಕರ್ಣ ತಾಳಿ ಕಟ್ಟಿರುವುದು ಅವಳಿಗೆ ಒಂದಿಷ್ಟೂ ಇಷ್ಟ ಆಗಿಲ್ಲ.

ಕರ್ಣನನ್ನು ಪ್ರಶ್ನೆ ಮಾಡಲು ಬಹಳ ಸರಳವಾದ ದಾರಿ ಇದ್ದರೂ ಸಹ ಅವಳು ತನ್ನ ಸ್ಥಿತಿಯನ್ನು ನೆನೆಸಿಕೊಂಡು ಹುಚ್ಚಿಯಂತೆ ಆಡುತ್ತಿದ್ದಾಳೆ.

ಒಮ್ಮೆ ನಗು, ಇನ್ನೊಮ್ಮೆ ಅಳು ಹೀಗೆ ಸಾಕಷ್ಟು ರೀತಿಯಲ್ಲಿ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾಳೆ. ಅವಳಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ನಿಯಂತ್ರಣವೇ ಇಲ್ಲ ಎಂದು ಅನಿಸುತ್ತಿದೆ.

ಸಾಹಿತ್ಯಾಳ ವರ್ತನೆಯನ್ನು ಕಂಡ ಕರ್ಣ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ನಿನಗೆ ನನ್ನ ಮೇಲೆ ಕೋಪ ಇದೆ ಎಂದಾರೆ ಮನಸಿಗೆ ಬಂದಷ್ಟು ಹೊಡಿ. ಆದರೆ, ಈ ರೀತಿ ಆಡಬೇಡ ಎಂದು ಕೇಳಿಕೊಂಡಿದ್ದಾನೆ.

ಕರ್ಣ ಏನೇ ಹೇಳಿದರೂ ಸಾಹಿತ್ಯಾ ಮಾತ್ರ ಸಾಮಾಧಾನ ಮಾಡಿಕೊಳ್ಳುತ್ತಾ ಇಲ್ಲ. ನಾನು ಕೀಲಿಕೊಟ್ಟ ಗೊಂಬೆ ಅಲ್ವಾ? ನಿಮಗೆಲ್ಲ ಎನ್ನುತ್ತಾ ಕಷ್ಟಪಡುತ್ತಿದ್ದಾಳೆ.

ಕರ್ಣ ಕೂಡ ಸಂಪೂರ್ಣ ಇಷ್ಟ ಇದ್ದುಕೊಂಡು ಈ ಮದುವೆ ಆಗಿಲ್ಲ. ಅನಿವ...