ಭಾರತ, ಮಾರ್ಚ್ 2 -- ಕಲರ್ಸ್ ಕನ್ನಡ ವಾಹಿನಿ ಹಲವು ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದೆ. ನಾಳೆ ಕೂಡ ಒಂದು ಹೊಸ ಧಾರಾವಾಹಿ ಆರಂಭವಾಗಲಿದೆ.

ಈಗಾಗಲೇ ಹಲವು ಪ್ರೋಮೋಗಳ ಮೂಲಕ ಕಥೆಯ ಸುಳಿವು ಕೊಟ್ಟ ವಾಹಿನಿ, 'ಭಾರ್ಗವಿ LLB' ಎಂಬ ಹೊಸ ಧಾರಾವಾಹಿಯನ್ನು ಆರಂಭಿಸುತ್ತಿದೆ.

ಇದು ಅಪ್ಪ ಮಗಳ ಅನುಬಂಧದ ಕಥೆಯಾಗಿದೆ. ತನ್ನ ಮಗಳು ಲಾಯರ್ ಆಗಬೇಕು ಎಂದು ಆಸೆಹೊತ್ತ ಅಪ್ಪ, ತನ್ನ ಮಗಳನ್ನು ಅದೇ ರೀತಿ ಬೆಳೆಸುತ್ತಾನೆ. ತನ್ನ ಮಗಳನ್ನು ರಾಣಿಯಂತೆ ನೋಡಿಕೊಳ್ಳುತ್ತಾನೆ.

ಓದು ಹಾಗೂ ಕಲಿಕೆಗೆ ಹೆಚ್ಚಿನ ಒತ್ತುಕೊಟ್ಟು ತನ್ನ ಮಗಳಿಗೆ ತನ್ನದೇ ಲಾಯರ್ ಕೋಟ್‌ ತೊಡಿಸಿ, ಖುಷಿ ಪಡುವ ಅಪ್ಪನ ಕನಸು ಈ ಧಾರಾವಾಹಿಯಲ್ಲಿದೆ.

ಊರಲ್ಲಿರುವ ದೊಡ್ಡ ದೊಡ್ಡ ಮನುಷ್ಯರನ್ನೇ ಎದುರು ಹಾಕಿಕೊಳ್ಳುವ ಸಾಹಸವನ್ನು ಭಾರ್ಗವಿ ಮಾಡುತ್ತಾಳೆ.

ತಪ್ಪು ಮಾಡಿದವರು ಯಾರೇ ಆಗಿರಲಿ ನಾವು ನ್ಯಾಯದ ಪರ ಹೋರಾಡಬೇಕು ಎಂದು ಅವಳ ತಂದೆ ಹೇಳಿದ ಮಾತುಗಳೇ ಅವಳಿಗೆ ಸ್ಪೂರ್ತಿಯಾಗಿರುತ್ತದೆ.

ಭಾರ್ಗವಿ LLB ಧಾರಾವಾಹಿಯು ಇದೇ ಸೋಮವಾರದಿಂದ ಅಂದರೆ ನಾಳೆಯಿಂದ (ಮಾ 3) ಕಲರ್...