ಭಾರತ, ಮಾರ್ಚ್ 10 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾಸರವಾಗುತ್ತಿರುವ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ದೃಷ್ಟಿ ತನ್ನ ಅಂದವನ್ನು ಅಡಗಿಸಿಕೊಂಡಿದ್ದಾಳೆ.

ದೃಷ್ಟಿಯ ತಾಯಿ ಬೇಕು ಎಂದೇ ದೃಷ್ಟಿಯ ಸೌಂದರ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾಳೆ. ಚಿಕ್ಕಂದಿನಿಂದಲೂ ದೃಷ್ಟಿ ಯಾವಾಗಲೂ ತನ್ನಂದವನ್ನು ಅಡಗಿಸಿಯೇ ಬದುಕುತ್ತಿದ್ದಾಳೆ.

ದೃಷ್ಟಿಯ ನಿಜವಾದ ಸೌಂದರ್ಯವನ್ನು ಅಡಗಿಸಿಟ್ಟರೆ, ಅವಳ ಜೀವನ ಸುಗಮವಾಗಿರುತ್ತದೆ ಎಂಬುದು ಅವಳ ಅಮ್ಮನ ಕಲ್ಪನೆಯಾಗಿರುತ್ತದೆ.

ದೃಷ್ಟಿ ಕೂಡ ಎಂದಿಗೂ ತಾನು ಭಿನ್ನವಾಗಿ ಕಾಣಿಸಬೇಕು, ಅಂದವಾಗಿರಬೇಕು ಎಂದು ಬಯಸಿಲ್ಲ. ಆ ಕಾರಣದಿಂದ ಇಂದಿಗೂ ಮುಖಕ್ಕೆ ಕಪ್ಪು ಬಳಿದುಕೊಂಡಿದ್ದಾಳೆ.

ಆದರೆ, ಆ ಸತ್ಯವನ್ನು ಈಗಾಗಲೇ ವೀಕ್ಷಕರಿಗೆ ತಿಳಿಸಲಾಗಿದೆ. ಹಾಗಾಗಿ, ದತ್ತನನ್ನು ಮದುವೆ ಆದ ನಂತರ ಆ ಸತ್ಯ ದತ್ತನಿಗೂ ಅವರ ಮನೆಯವರಿಗೂ ತಿಳಿಯಬೇಕು ಎಂದು ವೀಕ್ಷಕರು ಹೇಳುತ್ತಿದ್ದಾರೆ,

ದೃಷ್ಟಿ ತನ್ನ ನಿಜವಾದ ಅಂದವನ್ನು ತೋರಿಸಿದರೆ, ಧಾರಾವಾಹಿಯ ಕಥೆ ಕೂಡ ಇನ್ನಷ್ಟು ಚುರುಕಾಗಬಲ್ಲದು ಎಂದು ಎಲ್ಲರೂ ಅಂದು...