ಭಾರತ, ಮಾರ್ಚ್ 20 -- ಕಲರ್ಸ್ ಕನ್ನಡ ವಾಹಿನಿಯಲ್ಲಿ ಯುಗಾದಿಯಂದು ಭೀಮ ಸಿನಿಮಾ ಪ್ರಸಾರವಾಗಲಿದೆ. ಯುಗಾದಿ ಸಂಭ್ರಮ ಹೆಚ್ಚಿಸೋಕೆ ದುನಿಯಾ ವಿಜಯ್ ಜತೆಗೂಡುತ್ತಿದ್ದಾರೆ. ಭೀಮ ಸಿನಿಮಾವನ್ನು ಸಾಕಷ್ಟು ಜನ ಈಗಾಗಲೇ ವೀಕ್ಷಿಸಿದ್ದಾರೆ. ಆದರೆ ಈ ಬಾರಿ ಮನೆಯಲ್ಲೇ ಕೂತು ನೀವು ಈ ಸಿನಿಮಾವನ್ನು ನೋಡಬಹುದು. ಮಾರ್ಚ್ 30 ರಾತ್ರಿ 7:30ಕ್ಕೆ ಸಿನಿಮಾ ಪ್ರಸಾರವಾಗಲಿದೆ. ದುನಿಯಾ ವಿಜಯ್‌ ಅಭಿನಯದ ಭೀಮ ಸಿನಿಮಾ ಆಗಸ್ಟ್‌ 9ರಂದು ಬಿಡುಗಡೆಯಾಗಿತ್ತು. ವಿಜಯ್‌ ನಿರ್ದೇಶನದ ಸಲಗ ಸಿನಿಮಾ ಗೆದ್ದ ಬೆನ್ನಲ್ಲೇ ಘೋಷಣೆ ಮಾಡಿದ ಎರಡನೇ ಸಿನಿಮಾ ಈ ಭೀಮ. ಬಹುನಿರೀಕ್ಷೆ ಮೂಡಿಸಿದ್ದ ಈ ಚಿತ್ರ ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು.

ಗಾಂಜಾ ಮಾರಾಟ ಮಾಡುವವರ ವಿರುದ್ಧ ಪೊಲೀಸ್‌ ಅಧಿಕಾರಿ ಹೇಗೆ ಕ್ರಮಕೈಗೊಳ್ಳುತ್ತಾರೆ ಎಂಬುದು ಈ ಸಿನಿಮಾದಲ್ಲಿ ಹೆಚ್ಚು ರೋಚಕವಾಗಿದೆ. ಸಿನಿಮಾದ ಮೊದಲಾರ್ಧ ಹಾಸ್ಯ ಮಿಶ್ರಿತವಾಗಿಯೇ ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದ ಹಾಡುಗಳು ಕೂಡ ತುಂಬಾ ಸುಂದರವಾಗಿ ಮೂಡಿ ಬಂದಿವೆ. ಸಿನಿಮಾದಲ್ಲಿ...