ಭಾರತ, ಫೆಬ್ರವರಿ 13 -- ತೆಂಗಿನಕಾಯಿಯಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಸೇರಿದಂತೆ ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಬಿ6 ಹಾಗೂ ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ, ರಂಜಕಗಳು ಇರುವುದರಿಂದಲೇ ಇಂದು ದಕ್ಷಿಣ ಭಾರತದಲ್ಲಿ ಹೇರಳವಾಗಿ ಅದರಲ್ಲೂ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ಇದರ ಸೇವನೆ ಆರೋಗ್ಯಕ್ಕೆ ಎಷ್ಟು ಒಳೆಯದೋ ಅಷ್ಟೇ ತೆಂಗಿನಕಾಯಿಯ ಇನ್ನೊಂದು ಭಾಗ ಕೂಡ ನಮ್ಮ ಆರೋಗ್ಯಕ್ಕೆ ಅಮೃತವಿದ್ದಂತೆ. ಇದರ ಪರಿಚಯವಿದ್ದರೂ ಹೆಚ್ಚಿನವರು ಇದರ ಪ್ರಯೋಜನದ ತಿಳಿಯದೇ ಕಸದ ಬುಟ್ಟಿಗೆ ಎಸೆಯುತ್ತಾರೆ. ಅಷ್ಟಕ್ಕೂ ಯಾವುದದು ಭಾಗ? ಇದರ ಮಹತ್ವವೇನು? ಎಂಬಿತ್ಯಾದಿ ಮಾಹಿತಿಗಳನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ.

ಹೌದು! ತೆಂಗಿನಕಾಯಿಯ ಮಹತ್ವ ಹೆಚ್ಚಿನವರಿಗೆ ಗೊತ್ತು. ಸಾಂಪ್ರದಾಯಿಕ ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ತೆಂಗಿನಕಾಯಿಗೆ ಸುದೀರ್ಘ ಇತಿಹಾಸವಿದೆ. ತೆಂಗಿನಕಾಯಿ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಸಹ ಹೊಂದಿದೆ. ಹಾಗೆಯೇ, ತೆಂಗಿನಕಾಯಿಯಲ್...