ಭಾರತ, ಫೆಬ್ರವರಿ 20 -- ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನಮರ ಕೊಡುವ ಪ್ರತಿಯೊಂದು ವಸ್ತುವೂ ಉಪಯೋಗಗಳನ್ನು ಹೊಂದಿದೆ. ಬಾಯಾರಿಕೆಗೆ ಎಳನೀರು, ಹಸಿವಿಗೆ ತಿರುಳು, ಸಾಂಬಾರ್‌, ಚಟ್ನಿಗೆ ತೆಂಗಿನಕಾಯಿ ತುರಿ, ತೆಂಗಿನಹಾಲು, ತೆಂಗಿನ ಮಡಲು, ಗರಿಗಳೂ ವಿವಿಧ ರೀತಿಯ ಉಪಯೋಗಕ್ಕೆ ಬರುತ್ತದೆ. ಒಟ್ಟಾರೆ, ತೆಂಗಿನಮರದಲ್ಲಿ ವ್ಯರ್ಥ ಎನ್ನುವುದು ಏನೂ ಇಲ್ಲ ಎನ್ನುವುದು ಬಹಳ ಹಿಂದಿನಿಂದ ಚಾಲ್ತಿಯಲ್ಲಿರುವ ಮಾತು. ಇದೀಗ ಜೈಪುರ ಮೂಲದ ಸ್ಟಾರ್ಟಪ್‌ ತೆಂಗಿನ ಕಾಯಿಯ ಚಿಪ್ಪನ್ನು "ಇದು ಬರೀ ಚಿಪ್ಪಲ್ಲವೋ ಅಣ್ಣಾ" ಎಂಬ ದೃಷ್ಟಿಯಿಂದ ನೋಡಿದ್ದಾರೆ. ಈ ಚಿಪ್ಪುಗಳನ್ನು ಬ್ಯಾಟರಿಗಳಿಗೆ ಸೂಪರ್‌ಚಾರ್ಜರ್‌ ಆಗಿ ಬಳಸುವಲ್ಲಿ ಯಶಸ್ಸು ಪಡೆದಿದ್ದಾರೆ. ಈ ಕುರಿತು inc42 ವೆಬ್‌ತಾಣದಲ್ಲಿ ಆಸಕ್ತಿದಾಯಕ ಮಾಹಿತಿ ಪ್ರಕಟವಾಗಿದೆ.

ನಿಮಗೆ 55 Cancri e ಎಂದರೆ ಗೊತ್ತೆ? ಇದು ನಾಸಾವು 2004ರಲ್ಲಿ ಅನ್ವೇಷಣೆ ಮಾಡಿರುವ ಅನ್ಯಗ್ರಹ. ಇದು ನಮ್ಮಿಂದ ಸುಮಾರು 41 ಜ್ಯೋತಿರ್ವಷ ದೂರದಲ್ಲಿರುವ ಆಕಾಶಕಾಯ. ಈ ಅನ್ಯಗ್ರಹವು ಇಂಗಾಲದ ಅತ್ಯಂ...