ಭಾರತ, ನವೆಂಬರ್ 23 -- ಹಳೇಬೀಡು( ಹಾಸನ): ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಳೇಬೀಡಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಹಲವಾರು ವರ್ಷ ಬರಗಾಲವಿದ್ದ ಸಂದರ್ಭದಲ್ಲಿ ಬಂದಿರುವ ಕಾಡಾನೆಗಳು ವಾಪಸ್ಸು ಹೋಗಿಲ್ಲ. ಕೆಲವು ಸಂದರ್ಭಗಳಲ್ಲಿ ಮನುಷ್ಯರೂ ಕೂಡ ಕಾಡಿಗೆ ಹೋಗುವುದು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಗುಂಪುಗಳಲ್ಲಿ ಆನೆಗಳು ಇದ್ದರೆ ಅವುಗಳನ್ನು ಚದುರಿಸುವುದು ಕಷ್ಟ. ಈ ಬಗ್ಗೆ ಸಭೆ ಕರೆದು ಅರಣ್ಯ ಪಡೆಗಳನ್ನು ರಚಿಸಲಾಗಿದೆ.

ಯಾವುದೋ ಒಂದು ಘಟನೆ ಸಂಭವಿಸಿದಾಗ ಕಾರ್ಯಾಚರಣೆ ಮಾಡಿದರೆ ಸೂಕ್ತವಲ್ಲ. ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಕಾರ್ಯಪಡೆ ರಚಿಸಲಾಗಿದೆ. ತರಬೇತಿ, ವಾಹನ, ಸಲಕರಣೆ, ನಿಯಂತ್ರಣಾ ಕೊಠಡಿ ಸ್ಥಾಪಿಸಿ ಪ್ರತಿ ನಿತ್ಯ ಗಸ್ತು ತಿರುಗುವುದು, ಕಾರ್ಯಾಚರಣೆ ಮಾಡುವುದು ಹಾಗೂ ಆನೆಗಳು ಹೆಚ್ಚಿದ್ದ ಕಡೆ ಎಲ್ಲಾ ಪಡೆಗಳು ಹಾಗೂ ನೂರಾರು ಜನ ಸೇರಿ ಆನೆಗಳನ್ನು ಹಿ...