New delhi, ಮಾರ್ಚ್ 5 -- CISF Recruitment 2025: ಭಾರತ ದೇಶದ ವಿವಿಧ ಭಾಗಗಳ ಕೈಗಾರಿಕೆಗಳು, ವಿಮಾನ ನಿಲ್ದಾಣಗಳು ಸೇರಿದಂತೆ ನಾನಾ ವಲಯಗಳಲ್ಲಿ ಭದ್ರತಾ ಸೇವೆ ಒದಗಿಸುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಪೇದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಭಾರತದ ವಿವಿಧೆಡೆ ಕೆಲಸ ಮಾಡಲು 1161 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶುರುವಾಗಿದೆ. ಎಸ್‌ಎಸ್‌ಎಲ್‌ ಸಿಯಲ್ಲಿ ಉತ್ತೀರ್ಣರಾಗಿರುವ 23 ವರ್ಷದೊಳಗಿನ ಯುವಕರು ಹಾಗೂ ಯುವತಿಯರು ಅರ್ಜಿ ಸಲ್ಲಿಸಬಹುದು. ಇದಕ್ಕೆ ಪ್ರವೇಶ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಗಳು ಇರಲಿವೆ. ಒಟ್ಟು ಐದು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಇರಲಿದ್ದು. ಎಲ್ಲಾ ಹಂತಗಳಲ್ಲೂ ಉತ್ತೀರ್ಣರಾದವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಇದು ಕೇಂದ್ರ ಸರ್ಕಾರಿ ನೌಕರಿಗೂ ಆಗಿರುವುದರಿಂದ ವೇತನ ಶ್ರೇಣಿಯೂ ಉತ್ತಮವಾಗಿರಲಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಾರ್ಚ್ 5 ರಿಂದ 1161 ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ...