New Delhi, ಫೆಬ್ರವರಿ 4 -- CISF Constable Jobs: ಸಿಐಎಸ್‌ಎಫ್‌ನ 1124 ಕಾನ್‌ಸ್ಟೆಬಲ್‌/ ಚಾಲಕ ಹುದ್ದೆಗಳ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ (ಸಿಐಎಸ್ಎಫ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾನ್‌ಸ್ಟೆಬಲ್/ಡ್ರೈವರ್ ಪೋಸ್ಟ್‌ಗಳಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಾವು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಅಧಿಕೃತ ವೆಬ್‌ಸೈಟ್‌ cisfrectt.cisf.gov.in ನಲ್ಲಿ ಲಾಗಿನ್ ಆಗಿ ಸಲ್ಲಿಸಬಹುದು.

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್‌ (ಸಿಐಎಸ್ಎಫ್) ನಲ್ಲಿರುವ 1124 ಕಾನ್‌ಸ್ಟೆಬಲ್‌/ ಚಾಲಕ ಹುದ್ದೆಗೆ ನೇಮಕಾತಿ ಶುರುವಾಗಿದೆ. ಅರ್ಹ ಅಭ್ಯರ್ಥಿಗಳು 2025 ರ ಮಾರ್ಚ್ 4ರ ಒಳಗೆ ಅರ್ಜಿ ನಮೂನೆ ಭರ್ತಿ ಮಾಡಿ ಅಧಿಕೃತ ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಈಗಾಗಲೇ ಈ ಪ್ರಕ್ರಿಯೆ ಶುರುವಾಗಿದೆ. ಈ ನೇಮಕ ಪ್ರಕ್ರಿಯೆಯಲ್ಲಿ ಭೌತಿಕ ದಕ್ಷತೆ ಪರೀಕ್ಷೆ (ಪಿಇಟಿ)/ ಭೌತಿಕ ಪ್ರಮಾಣಿತ ಪರೀಕ್...