ಭಾರತ, ಫೆಬ್ರವರಿ 9 -- ಪ್ರತಿವರ್ಷ ಫೆಬ್ರುವರಿ 9 ರಂದು ಚಾಕೊಲೇಟ್ ಡೇಯನ್ನು ಆಚರಿಸಲಾಗುತ್ತದೆ. ಇದು ಪ್ರೇಮಿಗಳ ವಾರದ ಮೂರನೇ ದಿನ. ಪ್ರೀತಿಯ ಸಂಭ್ರಮವನ್ನು ಚಾಕೊಲೇಟ್‌ನ ಸಿಹಿಯೊಂದಿಗೆ ಆಚರಿಸುವ ದಿನವಿದು. ಪ್ರೀತಿಪಾತ್ರರಿಗೆ ಚಾಕೊಲೇಟ್ ನೀಡುವ ಮೂಲಕ ಅಥವಾ ಚಾಕೊಲೇಟ್ ರೆಸಿಪಿಗಳನ್ನು ನೀಡುವ ಮೂಲಕ ಈ ದಿನವನ್ನು ವಿಶೇಷವನ್ನಾಗಿಸಬಹುದು.

ಈ ಬಾರಿ ಚಾಕೊಲೇಟ್ ಡೇಗೆ ನೀವು ವಿಶೇಷವಾದ ಚಾಕೊಲೇಟ್ ಪೇಸ್ಟ್ರೀಯನ್ನು ನಿಮ್ಮ ಕೈಯಾರೆ ನೀವೇ ಮಾಡಿ ನಿಮ್ಮ ಪ್ರೀತಿಪಾತ್ರರಿಗೆ ಉಣಬಡಿಸಬಹುದು. ಇದು ಸಖತ್ ಟೇಸ್ಟಿ ಆಗಿರುವ ಜೊತೆ ವಿಶೇಷವಾಗಿಯೂ ಇರುತ್ತದೆ. ಹಾಗಾದರೆ ಚಾಕೊಲೇಟ್ ಪೇಸ್ಟ್ರಿ ತಯಾರಿಸುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.

ಈ ಚಾಕೊಲೇಟ್ ಪೇಸ್ಟ್ರಿ ಮೊಟ್ಟೆ ಇಲ್ಲದೇ ಮಾಡಬಹುದಾದ ರೆಸಿಪಿ. ಆ ಕಾರಣಕ್ಕೆ ಸಸ್ಯಾಹಾರಿಗಳು ಕೂಡ ಇಷ್ಟಪಟ್ಟು ತಿಂತಾರೆ. ಈ ಪ್ರೇಮಿಗಳ ವಾರದ ಚಾಕೊಲೇಟ್ ಡೇ ದಿನ ನಿಮ್ಮ ಆತ್ಮೀಯರಿಗೆ ವಿಶೇಷವಾಗಿ ಚಾಕೊಲೇಟ್ ಪೇಸ್ಟ್ರಿ ತಿನ್ನಿಸಬೇಕು ಎನ್ನುವ ಆಸೆ ಇದ್ದರೆ ಟ್ರೈ ಮಾಡಿ.

ಇದನ್ನೂ...