ಭಾರತ, ಮಾರ್ಚ್ 9 -- ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕು ಗೊಪ್ಪಲ್ಲಿ ಗೇಟ್ ಸಮೀಪ ಖಾಸಗಿ ಬಸ್ ವೇಗವಾಗಿ ಡಿಕ್ಕಿ ಹೊಡೆದು ಭೀಕರ ದುರಂತ ಸಂಭವಿಸಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಹೊತ್ತಿ ಉರಿದುಕೊಂಡಿದೆ. ಈ ದುರಂತದಲ್ಲಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಆಂಧ್ರಪ್ರದೇಶ ಮೂಲದವರು ಎಂದು ಹೇಳಲಾಗುತ್ತಿದ್ದು, ಖಾಸಗಿ ಬಸ್‌ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಗೋಪಲ್ಲಿ ಗೇಟ್‌ ಸಮೀಪ ಭಾನುವಾರ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್‌ - ಕಾರು ಡಿಕ್ಕಿಯಾಗಿದ್ದು, ಕಾರು ಹೊತ್ತಿ ಉರಿದರೆ, ಬಸ್ ಪಲ್ಟಿಯಾಗಿದೆ. ಹೊತ್ತಿ ಉರಿದ ಕಾರಿನಲ್ಲಿದ್ದ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಸಜೀವ ದಹನವಾದರು. ಮೃತರನ್ನು ಆಂಧ್ರ ಪ್ರದೇಶ ಮದನಪಲ್ಲಿ ಮೂಲದ ಧನಂಜಯ ರೆಡ್ಡಿ (31) ಮತ್ತು ಕಲಾವ...