ಭಾರತ, ಫೆಬ್ರವರಿ 16 -- ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ರಾಶಿ, ನಕ್ಷತ್ರಗಳು ಇರುವಂತೆ ಚೀನಿ ಜ್ಯೋತಿಷ್ಯದಲ್ಲಿ ಹುಟ್ಟಿದ ವರ್ಷಕ್ಕೆ ಅನುಗುಣವಾಗಿ ಒಂದೊಂದು ಪ್ರಾಣಿಗಳ ವರ್ಗಕ್ಕೆ ಸೇರಿಸಲಾಗುತ್ತದೆ. ನಾವು ಹುಟ್ಟಿದ ವರ್ಷದ ಆಧಾರದ ಮೇಲೆ ನಾವು ಯಾವ ಗುಂಪಿಗೆ ಸೇರಿದವರು ಎಂಬುದನ್ನು ಕಂಡುಹಿಡಿಯಬಹುದು. ನಮ್ಮಲ್ಲಿ 12 ರಾಶಿ ಇರುವಂತೆ ಅಲ್ಲಿ 12 ವರ್ಗಗಳಿವೆ. ಪ್ರತಿ ವರ್ಗಗಳಿಗೂ ಒಂದೊಂದು ಪ್ರಾಣಿಯ ಹೆಸರು ಇರಿಸಲಾಗಿದೆ. ಇಲಿ ಗುಂಪಿನಿಂದ ಚೀನಿ ರಾಶಿ ಆರಂಭವಾಗುತ್ತದೆ.

ಚೀನಿ ಜ್ಯೋತಿಷ್ಯದ ಪ್ರಕಾರ ಈ 5 ಗುಂಪಿಗೆ ಸೇರಿದವರು ಭಾರಿ ಅದೃಷ್ಟವಂತರು. ಅವರಿಗೆ ಯಾವಾಗಲೂ ಹಣದ ಸಮಸ್ಯೆ ಕಾಡುವುದೇ ಇಲ್ಲ. ಅಲ್ಲದೇ ಈ ಗುಂಪಿಗೆ ಸೇರಿದವರು ಯಾವಾಗಲೂ ಖುಷಿಯಾಗಿರುತ್ತಾರೆ. ಹಾಗಾದರೆ ಆ 5 ಅದೃಷ್ಟವಂತ ಗುಂಪಿನವರು ಯಾರು, ಅದರಲ್ಲಿ ನಿಮ್ಮ ರಾಶಿಯೂ ಇದ್ಯಾ ಎಂಬುದನ್ನು ಗಮನಿಸಿ.

ಇಲಿ ಗುಂಪು 1ನೇ ರಾಶಿಯನ್ನು ಪ್ರತಿನಿಧಿಸುತ್ತದೆ. ಇಲಿ ಗುಂಪಿಗೆ ಸೇರಿದ ಜನರು ಬಹಳ ಬುದ್ಧಿವಂತರು. ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಕಷ್...