Bengaluru, ಜನವರಿ 31 -- ಮಕ್ಕಳಿಗೆ ಊಟ ಮಾಡಿಸುವುದು ಒಂದು ದೊಡ್ಡ ಸವಾಲೇ ಸರಿ. ತಾಯಂದಿರು ವಿವಿಧ ರೀತಿಯ ತಂತ್ರಗಳನ್ನು ಮಾಡಿ, ಹಾಗೂ ಹೀಗೂ ಏನೇನೋ ಹೇಳಿ, ಊಟ ಮಾಡಿಸುವಾಗ ಸುಸ್ತಾಗುತ್ತಾರೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ಪೌಷ್ಟಿಕ ಆಹಾರ ಮುಖ್ಯವಾಗಿ ಬೇಕಾಗುತ್ತದೆ. ಇಲ್ಲವಾದರೆ ಅವರ ದೈಹಿಕ ಬೆಳವಣಿಗೆ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಅಂತಹ ಸಂದರ್ಭದಲ್ಲಿ ಪಾಲಕರು ಆಹಾರದ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ. ಮಕ್ಕಳ ಊಟದ ಡಬ್ಬಿಗೆ ಕೊಡಲು ಹಲವು ರೀತಿಯ ಆಹಾರಗಳಿವೆ. ಆದರೆ ಅವುಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ, ಮಕ್ಕಳ ಹೊಟ್ಟೆ ಕೆಟ್ಟು ಸಮಸ್ಯೆಯಾಗಬಹುದು. ಅಂತಹ ಯಾವ ಆಹಾರವನ್ನು ಮಕ್ಕಳಿಗೆ ಕೊಡಬಾರದು ಮತ್ತು ಯಾವ ರೀತಿಯ ಆಹಾರ ಸೂಕ್ತ ಎಂಬ ವಿವರ ಈ ಸ್ಟೋರಿಯಲ್ಲಿದೆ.

ಮಕ್ಕಳ ಊಟದ ಬಾಕ್ಸ್‌ಗೆ ಯಾವತ್ತೂ ಇನ್‌ಸ್ಟಂಟ್ ನೂಡಲ್ಸ್ ಕೊಡಬೇಡಿ. ಮಕ್ಕಳು ನೂಡಲ್ಸ್ ಕೇಳುತ್ತಾರೆ ನಿಜ, ಆದರೆ ಬೆಳಗ್ಗೆ ತಯಾರಿಸಿದ ನೂಡಲ್ಸ್, ಮಧ್ಯಾಹ್ನದ ಊಟದ ವೇಳೆಗೆ ತಿನ್ನಲು ಸೂಕ್ತವಲ್ಲ. ಅಲ್ಲದೆ, ನೂಡ...