ಭಾರತ, ಮಾರ್ಚ್ 4 -- ಬೋರ್ಡ್ ಎಕ್ಸಾಂಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು ಹೆಚ್ಚು ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ಅವರಲ್ಲಿ ಅನೇಕರು ಕೊನೆಯ ಕ್ಷಣದಲ್ಲಿ ಮತ್ತು ತಡರಾತ್ರಿಯ ಅಧ್ಯಯನಕ್ಕಾಗಿ ಎಚ್ಚರವಾಗಿರಲು ಹೆಚ್ಚು ಕೆಫೀನ್ ಮತ್ತು ಎನರ್ಜಿ ಡ್ರಿಂಕ್ಸ್‌ಗಳನ್ನು ಸೇವಿಸುತ್ತಾರೆ. ಎಲ್ಲಾ ಎನರ್ಜಿ ಡ್ರಿಂಕ್ಸ್‌ಗಳು ಕೆಫೀನ್, ಕೃತಕ ಸುವಾಸನೆ, ಸಿಟ್ರಿಕ್ ಆಮ್ಲ, ಸೋಡಿಯಂ ಸಿಟ್ರೇಟ್, ಕಾರ್ಬೊನೇಟೆಡ್ ನೀರು ಮತ್ತು ಗ್ಲೂಕೋಸ್ ಅನ್ನು ಹೊಂದಿರುತ್ತವೆ. ಇವು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು.

ಕೆಫಿನ್ ಮತ್ತು ಎನರ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಹೊಟ್ಟೆ ಹೆಚ್ಚು ಆಮ್ಲೀಯವಾಗಬಹುದು. ಇದು ಆಸಿಡ್ ರಿಫ್ಲೆಕ್ಸ್ ಮತ್ತು ಎದೆ ಉರಿಯಂತಹ ಅನುಭವಕ್ಕೆ ಕಾರಣವಾಗಬಹುದು. ಅನೇಕ ಜನರು ಕರುಳಿನ ಅಭ್ಯಾಸಗಳಲ್ಲಿ ಬದಲಾವಣೆಗಳನ್ನು ಅನುಭವಿಸಬಹುದು. ಉದಾಹರಣೆಗೆ ಆಗಾಗ್ಗೆ ಹೋಗುವ ಸಡಿಲವಾದ ಮಲ. ಸೋಡಿಯಂ ಸಿಟ್ರೇಟ್‌ನಂತಹ ಎನರ್ಜಿ ಡ್ರಿಂಕ್ಸ್‌ಗಳಲ್ಲಿರುವ ಇತರ ಪದಾರ್ಥಗಳು ಹೆಚ್...