Bagepalli, ಫೆಬ್ರವರಿ 16 -- Chikkaballapur News: ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕೊಲೆ, ದರೋಡೆ, ಸುಲಿಗೆ ಕಳ್ಳತನದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರ ಮಹಮ್ಮದ್‌ ಖಲೀಲ್‌ ವುಲ್ಲಾ ಆಲಿಯಾಸ್‌ ಬಾಂಬೆ ಸಲೀಂ ಸೇರಿದಂತೆ 8 ಮಂದಿಯನ್ನು ಬಾಗೇಪಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬೆ ಸಲೀಂ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಕೊಲೆ, ಸುಲಿಗೆ, ಡಕಾಯಿತಿ, ಕಳವು, ಅಪಹರಣ ಪ್ರಕರಣಗಳು ದಾಖಲಾಗಿವೆ. ವಿವಿಧ ಪೊಲೀಸ್ ಠಾಣೆಗಳಲ್ಲಿ 5 ಕೊಲೆ ಪ್ರಕರಣಗಳು, 4 ಡಕಾಯಿತಿ, 2 ಸುಲಿಗೆ ಪ್ರಕರಣಗಳು, 2 ಅಪಹರಣ ಸೇರಿದಂತೆ ಒಟ್ಟಾರೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೋಸ್ಟ್‌ ವಾಂಟೆಡ್‌ ದರೋಡೆಕೋರರ ಪಟ್ಟಿಯಲ್ಲಿ ಈತನ ಹೆಸರಿತ್ತು.

ಬಂಧಿತ ಆರೋಪಿಗಳು ಬಳಸುತ್ತಿದ್ದ ರೂ.30 ಲಕ್ಷ ಬೆಲೆ ಬಾಳುವ ಕಾರು, 5.15 ಲಕ್ಷ ರೂ. ನಗದು, ಒಂದು ಲಕ್ಷ ಬೆಲೆ ಬಾಳುವ ದ್ವಿಚಕ್ರ ವಾಹನ, ಡಕಾಯಿತಿಗೆ ಬಳಸುತ್ತಿದ್ದ ದ್ವಿಚಕ್ರ ವಾಹನ, ಚಾಕು, ...