Bengaluru, ಫೆಬ್ರವರಿ 14 -- Chhaava Twitter Review: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಸಿನಿಮಾ ಇಂದು (ಫೆ 14) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಆರಂಭದಿಂದಲೂ ಒಂದಷ್ಟು ಕಾರಣಕ್ಕೆ ಸಿನಿಪ್ರಿಯರ ವಲಯದಲ್ಲಿ ಹೆಚ್ಚು ಹೈಪ್‌ ಸೃಷ್ಟಿ ಮಾಡಿತ್ತು ಈ ಸಿನಿಮಾ. ಬಹುತೇಕರಿಗೆ ಛತ್ರಪತಿ ಶಿವಾಜಿ ಮಹಾರಾಜನ ಕಥೆ ಗೊತ್ತಿತ್ತು. ಸಿನಿಮಾಗಳೂ ಬಂದಿದ್ದವು. ಆದರೆ, ಅದೇ ಶಿವಾಜಿಯ ಹಿರಿಮಗ ಸಂಭಾಜಿ ಮಹಾರಾಜ್‌ ಬಗ್ಗೆ ಹೆಚ್ಚು ಮಾಹಿತಿ ನೋಡುಗ ವರ್ಗಕ್ಕೆ ಸಿಕ್ಕಿರಲಿಲ್ಲ. ಇದೀಗ ಛಾವಾ ಸಿನಿಮಾದಲ್ಲಿ ಸಂಭಾಜಿಯ ಹೋರಾಟದ ಕಥೆಯನ್ನು ವರ್ಣಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರಕ್ಕೆ ಪಾಸಿಟಿವ್‌ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರತಂಡವೂ ಸಂಭ್ರಮದಲ್ಲಿದೆ.

ಐತಿಹಾಸಿಕ ಹಿನ್ನೆಲೆಯ ಈ ಸಿನಿಮಾ ಮರಾಠಾ ದೊರೆ ಛತ್ರವತಿ ಶಿವಾಜಿ ಮಹಾರಾಜ್‌ ಅವರ ಹಿರಿ ಮಗ ಸಂಭಾಜಿ ಮಹಾರಾಜ್‌ ಅವರನ್ನು ಆಧರಿಸಿದೆ. ಸಂಭಾಜಿಯಾಗಿ ವಿಕ್ಕಿ ಕೌಶಾಲ್‌ ನಟಿಸಿದರೆ, ಆತನ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಬಾಲ...