Bengaluru, ಫೆಬ್ರವರಿ 14 -- Chhaava Review: ಇತಿಹಾಸದ ಪುಟಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಸಂಭ್ರಮಿಸಿದಷ್ಟು, ಆತನ ನಂತರದ ವಂಶವನ್ನು ಎತ್ತಿ ಮೆರೆಸಿದ್ದು ಕಡಿಮೆ. ಪಠ್ಯಗಳಲ್ಲೂ ಆ ಬಗ್ಗೆ ಸಿಗುವ ಮಾಹಿತಿಯೂ ಪರಿಪೂರ್ಣವಾಗಿಲ್ಲ. ಇದೀಗ ತೆರೆಮರೆಯ ಇತಿಹಾಸವನ್ನು ಹೊಸ ಹೊಳಪಿನೊಂದಿಗೆ ತೆರೆಗೆ ತಂದಿದ್ದಾರೆ ನಿರ್ದೇಶಕ ಲಕ್ಷ್ಮಣ್‌ ಉಟೇಕರ್.‌ 'ಜರಾ ಹಟ್ಕೆ ಜರಾ ಬಚ್ಕೆ', 'ಮಿಮಿ' ಮತ್ತು 'ಲುಕಾ ಚುಪ್ಪಿ' ಸಿನಿಮಾಗಳ ಮೂಲಕ ಕಮರ್ಷಿಯಲ್‌ ಸಿನಿಮಾಗಳನ್ನು ನೀಡಿದ್ದ ಲಕ್ಷ್ಮಣ್‌, ಛಾವಾ ಸಿನಿಮಾದೊಂದಿಗೆ ಇತಿಹಾಸವನ್ನು ಕೆದಕುವ ಪ್ರಯತ್ನ ಮಾಡಿದ್ದಾರೆ. ದೃಶ್ಯವೈಭೋಗದ ಮೂಲಕವೇ ಮರಾಠಾ ಸಾಮ್ರಾಜ್ಯದ ವೈಭವವನ್ನು ತೆರೆದಿಟ್ಟಿದ್ದಾರೆ. ಹಾಗಾದರೆ ಹೇಗಿದೆ ಛಾವಾ ಸಿನಿಮಾ? ಇಲ್ಲಿದೆ ವಿಮರ್ಶೆ.

ಛಾವಾ ಎಂದರೆ ಸಿಂಹದ ಮರಿ ಎಂದರ್ಥ. ಶಿವಾಜಿ ಮಹಾರಾಜರ ಮಗ ಸಂಭಾಜಿಯೇ ಇಲ್ಲಿ ಸಿಂಹದ ಮರಿ. ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್‌ ಬರೆದ ಛಾವಾ ಹೆಸರಿನ ಕಾದಂಬರಿಯನ್ನೇ ಆಧರಿಸಿ ನಿರ್ದೇಶಕ ಲಕ್ಷ್ಮಣ್‌ ಉಟೇಕರ್‌ ಈ ಸಿನಿಮಾ ಕೆತ್ತಿದ್ದ...