ಭಾರತ, ಫೆಬ್ರವರಿ 12 -- ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ 'ಛಾವಾ' ಬಿಡುಗಡೆಗೆ ಎರಡೇ ದಿನ ಬಾಕಿ ಉಳಿದಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಐತಿಹಾಸಿ ಹಾಗೂ ಪೌರಾಣಿಕ ಶೈಲಿಯಲ್ಲಿ ಬಿಡುಗಡೆಯಾದ ಟ್ರೇಲರ್ ನೋಡಿಯೇ ಹಲವರು ನಾವು ಈ ಸಿನಿಮಾ ನೋಡಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅದೂ ಅಲ್ಲದೇ ಈ ಬಾರಿ ರಶ್ಮಿಕಾ ಮಂದಣ್ಣ ರಾಣಿ ಪಾತ್ರದಲ್ಲಿ ಅಭಿನಯಿಸಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ. ರಶ್ಮಿಕಾ ಸ್ವತಃ ಈ ಸಿನಿಮಾ ನನಗೆ ತುಂಬಾ ಖುಷಿಕೊಟ್ಟ ಸಿನಿಮಾ ಎಂದು ಹೇಳಿಕೊಂಡಿರುವ ಕಾರಣ ಇನ್ನಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾದ ಪ್ರಚಾರವೂ ಜೋರಾಗಿ ನಡೆಯುತ್ತಿದೆ.

ಛಾವಾ ಸಿನಿಮಾ ಬಿಡುಗಡೆಗೆ ಇನ್ನು ಎರಡೇ ದಿನ ಬಾಕಿ ಉಳಿದಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನದ ಕಥೆಯನ್ನು ಹೊಂದಿದೆ. ಈ ಸಿನಿಮಾ ಇದೇ ತಿಂಗಳು ಅಂದರೆ ಫೆ 14ರಂದು ಬಿಡುಗಡೆಯಾಗಲಿದೆ...