Bangalore, ಏಪ್ರಿಲ್ 10 -- Chhaava OTT release: ವಿಕ್ಕಿ ಕೌಶಲ್‌ ನಟಿಸಿರುವ ಛಾವಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. ಈ ಸಿನಿಮಾದಲ್ಲಿ ಚತ್ರಪತಿ ಸಾಂಬಾಜಿ ಮಹಾರಾಜ್‌ರ ಕಥೆಯಿತ್ತು. ಬಾಕ್ಸ್‌ ಆಫೀಸ್‌ನಲ್ಲಿ 804 ಕೋಟಿ ರೂಪಾಯಿ ಬಾಚಿಕೊಂಡ ಈ ಸಿನಿಮಾ ಇದೀಗ ಒಟಿಟಿಯತ್ತ ಮುಖ ಮಾಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್‌ 11ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ಸಿನಿಮಾಕ್ಕೆ ಲಕ್ಷ್ಮನ್‌ ಉಟೇಕರ್‌ ನಿರ್ದೇಶನವಿದೆ. ದಿನೇಶ್‌ ವಿಜಾನ್‌ ನಿರ್ಮಾಣ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಛಾವಾ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿತ್ತು.

ರಶ್ಮಿಕಾ ಮಂದಣ್ಣ, ಅಕ್ಷಯ್‌ ಖನ್ನಾ, ವಿನೀತ್‌ ಕುಮಾರ್‌‌ ಸಿಂಗ್‌ ಮತ್ತು ಅಶುತೋಷ್‌ ರಾಣಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಛಾವಾ ಸಿನಿಮಾವು ಏಪ್ರಿಲ್‌ 11, 2025ರಂದು ರಿಲೀಸ್‌ ಆಗಲಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ನೆಟ್‌ಫ್ಲಿಕ್ಸ್‌ ಅಧಿಕೃತವಾಗಿ ಅಪ್‌ಡೇಟ್‌ ನೀಡಿದೆ. "ಧೈರ್ಯಶಾಲಿ ರಾಜನ ಕಥೆ ಏಪ್ರಿಲ್‌ 11ರಂದು ನೆಟ್‌...