Bangalore, ಏಪ್ರಿಲ್ 3 -- Chhaava OTT release date: ಛಾವಾ ಸಿನಿಮಾವು ವಿಕ್ಕಿ ಕೌಶಲ್‌ ನಟಿಸಿದ ಈ ವರ್ಷದ ಬ್ಲಾಕ್‌ಬಸ್ಟರ್‌ ಸಿನಿಮಾ ಶೀಘ್ರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಒಟಿಟಿ ಪ್ಲೇ ವರದಿ ಮಾಡಿದೆ. ಈ ಸಿನಿಮಾವು ಚಿತ್ರಮಂದಿರಗಳಲ್ಲಿನ ಓಟ ಸದ್ಯದಲ್ಲಿಯೇ ಕೊನೆಗೊಳ್ಳಲಿದೆ. ಶೀಘ್ರದಲ್ಲಿ ಈ ಸಿನಿಮಾ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಲಿದೆ. ಸಿಕಂದರ್‌ ಸಿನಿಮಾವು ಇನ್ನು ಒಂದೆರಡು ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ಗಳಿಕೆ ಮಾಡುವ ಸೂಚನೆಯಿದೆ. ಆದರೆ, ಛಾವಾ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಈಗಾಗಲೇ ಆರುನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹೀಗಾಗಿ, ಛಾವಾ ದಾಖಲೆಯನ್ನು ಸಿಕಂದರ್‌ ಮುರಿಯುವ ಯಾವುದೇ ಸಾಧ್ಯತೆಗಳು ಇಲ್ಲ. ಬನ್ನಿ ಛಾವಾ ಸಿನಿಮಾದ ಒಟಿಟಿ ಬಿಡುಗಡೆ ವಿವರ ಪಡೆದುಕೊಳ್ಳೋಣ.

ಛಾವಾ ಸಿನಿಮಾವು ಏಪ್ರಿಲ್‌ 11, 2025ರಂದು ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ವಿಕ್ಕಿ ಕೌಶಲ್‌ ನಟನೆಯ ಈ ಸಿನಿಮಾವು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಳುತ್ತಿದೆ. ಇನ್ನ...