ಭಾರತ, ಏಪ್ರಿಲ್ 11 -- Chhaava on OTT: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಮುಗಿಸಿರುವ ಛಾವಾ ಸಿನಿಮಾವು ನಿನ್ನೆ ಮಧ್ಯರಾತ್ರಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹೌದು, ವಿಕ್ಕಿ ಕೌಶಲ್‌ ನಟನೆಯ ಛಾವಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್‌ 11ರಂದು ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ಭಾರತದ ಒಂದಿಷ್ಟು ಜನರಿಗೆ ನಿರಾಶೆ ತಂದಿದೆ. ಚಿತ್ರ ತಯಾರಕರು ಈ ರೀತಿ ಮಾಡಬಾರದಿತ್ತು ಎಂದು ಸಾಕಷ್ಟು ಜನರು ಸೋಷಿಯಲ್‌ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಭರ್ಜರಿ ಗಳಿಕೆ ಮಾಡಿರುವ ಈ ಚಿತ್ರ‌ ಹೆಚ್ಚು ಜನರಿಗೆ ತಲುಪುವ ಅವಕಾಶ ಈ ಮೂಲಕ ಮಿಸ್‌ ಆಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಹಾಗಾದರೆ, ಚಿತ್ರತಂಡ ಮಾಡಿರುವ ತಪ್ಪೇನು? ಬನ್ನಿ ತಿಳಿಯೋಣ.

ಹೌದು, ಛಾವಾ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ. ವಿಕ್ಕಿ ಕೌಶಲ್‌- ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಒಟಿಟಿಯಲ್ಲಿ ಹಿಂದಿ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಚಿತ್ರತಂಡವು ಥಿಯೇಟರ್‌ಗಳಲ್ಲಿ ಯಾವ ಭಾಷೆಯಲ್ಲಿ ಬಿಡುಗ...