ಭಾರತ, ಫೆಬ್ರವರಿ 14 -- Rashmika mandanna in chhaava film: ಛಾವಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಹಾಗೂ ಅವರ ಅಭಿನಯ ಜನಮೆಚ್ಚುಗೆ ಗಳಿಸಿದೆ. ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದಾಗಲೇ ಸಾಕಷ್ಟು ಜನ ಈ ಸಿನಿಮಾದ ಬಗ್ಗೆ ಹಾಗೂ ರಶ್ಮಿಕಾ ಅವರ ಪಾತ್ರದ ಬಗ್ಗೆ ಕುತೂಹಲ ಹೊಂದಿದ್ದರು. ಹಿಂದೆಂದೂ ಅಭಿನಯಿಸಿರದ ರೀತಿಯ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ ಎಂದು ಎಲ್ಲರ ಗಮನ 'ಛಾವಾ' ಸಿನಿಮಾದತ್ತ ನೆಟ್ಟಿತ್ತು. ರಶ್ಮಿಕಾ ಆ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. 'ಛಾವಾ' ಸಿನಿಮಾದಲ್ಲಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ಯಾನ್-ಇಂಡಿಯನ್ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

ಛಾವಾ ಚಿತ್ರದಲ್ಲಿ, ರಶ್ಮಿಕಾ ಛತ್ರಪತಿ ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಗಿನ ಕಾಲದ ಸೀರೆ, ಆಭರಣ ಹಾಗೂ ಹಾವ ಭಾವದ ಮೂಲಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯೇಸುಬಾಯಿ ಪಾತ್ರ ವೀಕ್ಷ...