Bengaluru, ಫೆಬ್ರವರಿ 17 -- Chhaava Collection Day 2: ಕಳೆದ ಶುಕ್ರವಾರ (ಫೆ. 14) ಬಿಡುಗಡೆ ಆದ ಮರಾಠಾ ದೊರೆ ಸಂಭಾಜಿ ಮಹಾರಾಜ್‌ ಕುರಿತ ಛಾವಾ ಸಿನಿಮಾ ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮೊದಲ ದಿನವೇ ದಾಖಲೆಯ ಕಲೆಕ್ಷನ್‌ ಮಾಡಿದ ಈ ಸಿನಿಮಾ, ಇದೀಗ ವಾರಾಂತ್ಯ ಕಳೆಯುವುದರೊಳಗೆ ಶತಕೋಟಿ ಕ್ಲಬ್‌ ಸೇರಿ ಇತಿಹಾಸ ನಿರ್ಮಿಸಿದೆ. 2025ರ ಆರಂಭದಿಂದಲೂ ಬಾಲಿವುಡ್‌ನ ಯಾವೊಂದು ಸಿನಿಮಾ ಇಷ್ಟೊಂದು ವೇಗವಾಗಿ 100 ಕೋಟಿ ರೂ. ಗಳಿಕೆ ಮಾಡಿರಲಿಲ್ಲ. ಇದೀಗ ಆ ದಾಖಲೆ ಛಾವಾ ಸಿನಿಮಾ ಪಾಲಾಗಿದೆ.

ಫೆಬ್ರವರಿ 14ರ ಪ್ರೇಮಿಗಳ ದಿನದ ಪ್ರಯುಕ್ತ ವಿಶ್ವದಾದ್ಯಂತ ಬಿಡುಗಡೆಯಾದ ಐತಿಹಾಸಿಕ ಹಿನ್ನೆಲೆಯ ಛಾವಾ ಸಿನಿಮಾ, ಮೊದಲ ದಿನ 31 ಪ್ಲಸ್‌ ಕೋಟಿ ಗಳಿಕೆ ಮಾಡಿತ್ತು. ಎರಡನೇ ದಿನ ಭಾರತದಲ್ಲಿ 36.50 ಕೋಟಿ ರೂ. ಕಲೆಕ್ಷನ್‌ ಮಾಡಿ, ಕೇವಲ ಎರಡೇ ದಿನಗಳಲ್ಲಿ 67.50 ಕೋಟಿ ಬಾಚಿಕೊಂಡಿತ್ತು. ಇದೀಗ ಇದೇ ಸಿನಿಮಾ ಮೂರನೇ ದಿನ ಅಂದರೆ ಭಾನುವಾರದಂದು ದಾಖಲೆಯ ಕಲೆಕ್ಷನ್‌ ಮಾಡಿದೆ. ಬರೋಬ್ಬರಿ 48.5 ಕೋಟಿ ಬಾಚಿಕೊಂಡಿದೆ.

ಇದನ್ನೂ ಓ...