Bengaluru, ಫೆಬ್ರವರಿ 16 -- Chhaava Collection Day 2: ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಐತಿಹಾಸಿಕ ಹಿನ್ನೆಲೆಯ ಛಾವಾ ಸಿನಿಮಾ, ಶುಕ್ರವಾರ (ಫೆಬ್ರವರಿ 14) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬಾಲಿವುಡ್‌ನಲ್ಲಿ ಆರಂಭದಿಂದಲೂ ಸಾಕಷ್ಟು ಕ್ರೇಜ್‌ ಸೃಷ್ಟಿ ಮಾಡಿದ್ದ ಈ ಸಿನಿಮಾ, ಅದಕ್ಕೆ ತಕ್ಕಂತೆ ಮೊದಲ ದಿನ ದಾಖಲೆಯ ಕಲೆಕ್ಷನ್‌ ಮಾಡಿ, ಕಮಾಲ್‌ ಮಾಡಿತ್ತು. ಇದೀಗ ಎರಡನೇ ದಿನವೂ ತನ್ನ ಅಬ್ಬರವನ್ನು ಮುಂದುವರಿಸಿದೆ.

ಮೊದಲ ದಿನ 31 ಕೋಟಿ ಗಳಿಕೆ ಕಂಡಿದ್ದ ಛಾವಾ ಸಿನಿಮಾ, ಎರಡನೇ ದಿನ ಭಾರತದಲ್ಲಿ 36.50 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಎರಡು ದಿನದ ಗಳಿಕೆ ಲೆಕ್ಕ ಹಾಕಿದರೆ ಒಟ್ಟಾರೆ 67.50 ಕೋಟಿ ಬಾಚಿಕೊಂಡಿದೆ ಎಂದು ಸ್ಯಾಕ್ನಿಲ್ಕ್‌ ವರದಿ ಮಾಡಿದೆ. ಈ ದಾಖಲೆಯ ಗಳಿಕೆ ಮೂಲಕ ಪ್ರಚಂಡ ಗೆಲುವು ದಾಖಲಿಸಿದೆ ಛಾವಾ ಸಿನಿಮಾ. ಇನ್ನೇನು ಮುಂದಿನ ಇನ್ನೆರಡೇ ದಿನಗಳಲ್ಲಿ ಈ ಸಿನಿಮಾ ಶತಕೋಟಿ ಗಳಿಕೆ ಕಾಣುವ ಸಾಧ್ಯತೆಯಿದೆ. ಇತ್ತ ವಿಶ್ವದಾದ್ಯಂತ ಈ ಸಿನಿಮಾ ಈಗಾಗಲೇ 150 ಕ...