Bengaluru, ಫೆಬ್ರವರಿ 26 -- Chhaava Collection Day 12: ಬಾಲಿವುಡ್‌ ನಟ ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಅವರ ಛಾವಾ ಸಿನಿಮಾ ಬಿಡುಗಡೆಯಾಗಿ 12 ದಿನಗಳು ಕಳೆದಿವೆ. ಈ 12 ದಿನಗಳ ಅವಧಿಯಲ್ಲಿ ಕಲೆಕ್ಷನ್‌ ವಿಚಾರದಲ್ಲಿ ಬಂಪರ್ ಗಳಿಕೆಯನ್ನು ಕಂಡಿದೆ ಈ ಐತಿಹಾಸಿಕ ಸಿನಿಮಾ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಒಳ್ಳೆಯ ಗಳಿಕೆ ಮುಂದುವರಿಸಿದೆ. ಹಾಗಾದರೆ, 12 ದಿನಗಳ ಒಟ್ಟಾರೆ ಗಳಿಕೆ ಎಷ್ಟು? ವಿದೇಶದಿಂದ ಈ ಚಿತ್ರಕ್ಕೆ ಹರಿದುಬಂದ ಮೊತ್ತ ಎಷ್ಟು? ಇಲ್ಲಿದೆ ವಿವರ.

ಛತ್ರಪತಿ ಶಿವಾಜಿ ಮಹಾರಾಜ್ ಅವರ ಮಗ ಸಂಭಾಜಿ ಮಹಾರಾಜನ ಸಾಹಸದ ಜೀವನ ಆಧರಿಸಿದ ಕಥೆಯೇ ಈ ಛಾವಾ. ಮರಾಠಿ ಲೇಖಕ ಶಿವಾಜಿ ಸಾವಂತ್‌ ಬರೆದ ಛಾವಾ (ಸಿಂಹದ ಮರಿ) ಹೆಸರಿನ ಪುಸ್ತಕ ಆಧರಿಸಿ, ಅದೇ ಹೆಸರಿನಲ್ಲಿ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದರೆ, ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ಎದುರಾಗಿದ್ದಾರೆ. ಇನ್ನುಳಿದಂತೆ...