ಭಾರತ, ಫೆಬ್ರವರಿ 18 -- Chhaava Box Office Collection Day 5: ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಸಿನಿಮಾ ಬಾಕ್ಸ್‌ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆಯುತ್ತ ಮುನ್ನುಗ್ಗುತ್ತಿದೆ. ಮೊದಲ ಮೂರು ದಿನಗಳಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದ ಸಿನಿಮಾ ಐದನೇ ದಿನವಾದ ಇಂದು (ಫೆ 18) 150 ಕೋಟಿ ರೂಪಾಯಿ ಗಡಿ ದಾಟುವ ಸಾಧ್ಯತೆಗಳು ಗೋಚರಿಸಿವೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ಲೈವ್ ಮಿಂಟ್ ವರದಿ ಪ್ರಕಾರ, ಇಂದು ಬೆಳಗ್ಗೆ ಪ್ರದರ್ಶನದಲ್ಲಿ 11.09 ಕೋಟಿ ರೂಪಾಯಿ ಗಳಿಸಿತ್ತು.

ಮರಾಠ ರಾಜ ಸಂಭಾಜಿ ಮಹಾರಾಜ್‌ ಕಥೆಯನ್ನು ಆಧರಿಸಿದ ಛಾವಾ ಸಿನಿಮಾ ಮೊದಲ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 140.5 ಕೋಟಿ ರೂಪಾಯಿ ಆದಾಯ ಗಳಿಸಿದೆ. ಐದನೇ ದಿನ ಎಲ್ಲ ಭಾಷೆಗಳ ಪ್ರದರ್ಶನ ಸೇರಿ ಬೆಳಗ್ಗೆ 11.09 ಕೋಟಿ ರೂಪಾಯಿ ಗಳಿಸಿದೆ ಎಂದು ಸಿನಿಮಾ ಪ್ರದರ್ಶನದ ಟ್ರಾಕಿಂಗ್‌ ಮಾಡುವ ಸ್ಯಾಕ್ನಿಲ್ಕ್‌ ಹೇಳಿದೆ. ಹಿಂದಿ ಭಾಷೆಯ ಈ ಸಿನಿಮಾ ಇಂದು (ಫೆ 18) ಬೆಳಗ್ಗೆ ಪ್ರದರ್ಶನಕ್ಕೆ ಶೇಕಡ 22.31 ಸೀಟು ಭರ್ತಿಯಾಗಿ...