ಭಾರತ, ಮಾರ್ಚ್ 4 -- Chhaava box office collection day 18: ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ದೇಶದ ಬಾಕ್ಸ್‌ ಆಫೀಸ್‌ನಲ್ಲಿ ತನ್ನ ಓಟ ಮುದುವರೆಸಿದೆ. ಮೂರನೇ ವಾರದಲ್ಲಿ ಕಲೆಕ್ಷನ್‌ ಕಡಿಮೆಯಾಗಿದ್ದರೂ, ಚಿತ್ರದ ಒಟ್ಟಾರೆ ಕಲೆಕ್ಷನ್‌ ಭರ್ಜರಿಯಾಗಿದೆ. ಈ ಸಿನಿಮಾವು 500 ಕೋಟಿ ಕ್ಲಬ್‌ಗೆ ಸೇರಲು ದಾಪುಗಾಲಿಡುತ್ತಿದೆ. ಛಾವಾದ ಕಲೆಕ್ಷನ್‌ ಆರಂಭದಿಂದಲೂ ಉತ್ತಮವಾಗಿತ್ತು. ಮೊದಲ ವಾರ ಬಾಕ್ಸ್‌ ಆಫೀಸ್‌ನಲ್ಲಿ 219.25 ಕೋಟಿ ರೂ ಗಳಿಸಿತ್ತು. ಎರಡನೇ ವಾರದಲ್ಲಿ 180.25 ಕೋಟಿ ರೂ. ಗಳಿಸಿದೆ. ಸಹಜವಾಗಿ ಮೂರನೇ ವಾರದಲ್ಲಿ ಇದರ ಕಲೆಕ್ಷನ್‌ ಕಡಿಮೆಯಾಗಿದೆ.

ಮೂರನೇ ಶುಕ್ರವಾರ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 13 ಕೋಟಿ ಗಳಿಸಿತ್ತು. ಶನಿವಾರ 22 ಕೋಟಿ ಗಳಿಸಿತ್ತು. ಭಾನುವಾರ ಅಂದಾಜು 24.25 ಕೋಟಿ ರೂ. ಗಳಿಸಿತ್ತು. ಸೋಮವಾರದ ಗಳಿಕೆ ಸೇರಿದರೆ ಮೂರನೇ ವಾರದಲ್ಲಿ ಇಲ್ಲಿಯವರೆಗೆ 67.75 ಕೋಟಿ ರೂ.ಗಳನ್ನು ಗಳಿಸಿದೆ. ಛಾವಾ ಸಿನಿಮಾದ ಒಟ್ಟಾರೆ ಕಲೆಕ್ಷನ್‌ ಇಲ್ಲಿಯ...