ಭಾರತ, ಫೆಬ್ರವರಿ 21 -- ವಿಕ್ಕಿ ಕೌಶಲ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಐತಿಹಾಸಿಕ ಹಿನ್ನೆಲೆಯುಳ್ಳ ಛಾವಾ ಚಿತ್ರ ಬಾಲಿವುಡ್‌ನ ಈ ವರ್ಷದ ಸೂಪರ್ ಹಿಟ್ ಸಿನಿಮಾ ಎನ್ನಿಸಿಕೊಂಡಿದೆ. ಸಿನಿ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದ ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ 200 ಕೋಟಿ ಕ್ಲಬ್ ಸೇರಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆದ ಸಿನಿಮಾ ಇದು ಎಂಬ ಖ್ಯಾತಿಯನ್ನೂ ಪಡೆದಿದೆ.

ಟ್ರೇಡ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ ಈ ಚಿತ್ರವು ಏಳನೇ ದಿನದಂದು ಎಲ್ಲಾ ಭಾಷೆಗಳಲ್ಲಿ ಸುಮಾರು 19.61 ಕೋಟಿ ಗಳಿಸಿದೆ. ಚಿತ್ರದ ಒಟ್ಟು ಗಳಿಕೆ 217.36 ಕೋಟಿಯಾಗಿದೆ. ಗುರುವಾರ ಹಿಂದಿಯಲ್ಲಿ ಈ ಚಿತ್ರ ಒಟ್ಟಾರೆಯಾಗಿ ಶೇ 23.42 ರಷ್ಟು ಗಳಿಕೆ ಕಂಡಿದೆ.

7ನೇ ದಿನ ಸಿನಿಮಾದ ಬೆಳಗಿನ ಪ್ರದರ್ಶನವನ್ನು ಶೇ 17.25 ರಷ್ಟು ಜನರು ನೋಡಿದ್ದು, ಮಧ್ಯಾಹ್ನ ಶೇ 24.14 ಮತ್ತು ಸಂಜೆ ಶೇ 28.88 ರಷ್ಟು ಮಂದಿ ನೋಡಿದ್ದಾರೆ. ಛಾವಾ ಸಿನಿಮಾವು ಫೆ...