ಭಾರತ, ಫೆಬ್ರವರಿ 14 -- ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ 'ಛಾವಾ' ಇಂದು ಫೆಬ್ರವರಿ 14, 2025ರಂದು ಬಿಡುಗಡೆಯಾಗಿದೆ. ಮರಾಠ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದು. ಈ ಸಿನಿಮಾ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ತುಂಬಾ ನಿರೀಕ್ಷೆ ಮೂಡಿಸಿದ ಸಿನಿಮಾ ಇದು. ಈ ಸಿನಿಮಾದ ಅಡ್ವಾನ್ಸ್‌ ಬುಕಿಂಗ್ ಕೂಡ ತುಂಬಾ ಉತ್ತಮವಾಗಿತ್ತು, ಅದೇ ರೀತಿ ಬಾಕ್ಸ್‌ ಆಫೀಸ್‌ನಲ್ಲಿಯೂ 'ಛಾವಾ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣ ತೋರುತ್ತಿದೆ. ಸಿನಿಮಾ ವೀಕ್ಷಿಸಿದ ಎಲ್ಲರೂ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದು, ಟ್ವಿಟರ್‍‌ನಲ್ಲಿಯೂ ಸಿನಿಮಾ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಈ ಕಾರಣದಿಂದಲೂ ಸಿನಿಮಾ ಇನ್ನಷ್ಟು ಹಿಟ್‌ ಆಗುವ ಸಾಧ್ಯತೆ ಇದೆ. ವಿಕ್ಕಿ ಕೌಶಲ್‌ಗೆ 'ಛಾವಾ' ಸಿನಿಮಾ ಮೂಲಕ ಗೆಲುವು ಸಿಕ್ಕಿದೆ.

'ಛಾವಾ' ಸಿನಿಮಾದ ಮೊದಲ ದಿನದ ಅಂದಾಜು ಆದಾಯ'ಛಾವಾ' ಚಿತ್ರವು ತನ್ನ ಮೊದಲ ದಿನದ ಮುಂಗಡ ಬುಕಿಂಗ್‌ನಲ್ಲಿ ಭಾರತದಾದ್ಯಂತ ಸುಮಾರು 5 ಲಕ್ಷ...