ಭಾರತ, ಜನವರಿ 27 -- ಛತ್ರಪತಿ ಶಿವಾಜಿ ಮಹಾರಾಜರ ಮಗ ಸಂಭಾಜಿ ಅವರ ಬದುಕು ಕಟ್ಟಿಕೊಡುವ ಐತಿಹಾಸಿಕ ಚಿತ್ರ 'ಛಾವಾ'ಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಸಂಭಾಜಿ ಪಾತ್ರಧಾರಿ ವಿಕ್ಕಿ ಕೌಶಲ್ ಮತ್ತು ಸಂಭಾಜಿ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ಅಭಿನಯಿಸಿದ್ದ ರಶ್ಮಿಕಾ ಅವರ ನೃತ್ಯದ ಸನ್ನಿವೇಶವನ್ನು ತೆಗೆದುಹಾಕಲು ನಿರ್ದೇಶಕ ಲಕ್ಷ್ಮಣ್ ಉಟೇಕರ್ ನಿರ್ಧರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮರಾಠಿ ಭಾಷೆ ಮತ್ತು ಕೈಗಾರಿಕೆ ಖಾತೆಗಳ ಸಚಿವರಾಗಿರುವ ಉದಯ್ ಸಮಂತ್ ಅವರ ಆಕ್ಷೇಪಣೆಯ ನಂತರ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ನಿರ್ಧಾರ ಪ್ರಕಟಿಸಿದ್ದಾರೆ.

ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ರಾಜ್ ಠಾಕ್ರೆ ಅವರನ್ನು ಭೇಟಿಯಾದ ನಂತರ, ಛಾವಾ ಚಿತ್ರದಿಂದ ನೃತ್ಯದ ದೃಶ್ಯವನ್ನು ತೆಗೆದುಹಾಕಲು ನಿರ್ಧರಿಸಿರುವುದನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, 'ನಾನು ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದೇನೆ. ಅವರು ಅತ್ಯಾಸಕ್ತಿಯ ಓದುಗ ಮತ್ತು ಅಧ್ಯಯನಶೀಲ ವ್ಯಕ್ತಿ. ಅವರಿಂದ ಕೆಲವು ಸಲಹೆಗ...