ಭಾರತ, ಏಪ್ರಿಲ್ 18 -- ಭಾರತದ ಚೆಸ್ ಚತುರ ಎಂದೇ ಕರೆಸಿಕೊಳ್ಳುವ ಆರ್ ಪ್ರಜ್ಞಾನಂದ (Praggnanandhaa) ಅವರು ಕೆನಡಾದ ಟೊರೊಂಟೊದಲ್ಲಿ ನಡೆಯುತ್ತಿರುವ 2024ರ ಚೆಸ್ ಕ್ಯಾಂಡಿಡೇಟ್ ಟೂರ್ನಿಯ 11ನೇ ಸುತ್ತಿನಲ್ಲಿ (Chess Candidates 2024) ಅಮೆರಿಕದ ಚೆಸ್ ಪಟು ಹಿಕಾರು ನಕಮುರಾ (Hikaru Nakamura) ವಿರುದ್ಧ ಪರಾಭವಗೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತದ ಚೆಸ್ ಆಟಗಾರರು ನೀರಸ ಪ್ರದರ್ಶನ ನೀಡಿದ್ದಾರೆ. ಪ್ರಜ್ಞಾನಂದ ಅಲ್ಲದೆ, ಮತ್ತೊಬ್ಬ ಯುವ ಚೆಸ್ ಪಟು ವಿದಿತಿ ಗುಜರಾತಿ (Vidit Gujrathi) ಅವರು ಕೂಡ ಸೋಲನುಭವಿಸಿದ್ದಾರೆ. ಖುಷಿಯ ವಿಚಾರ ಅಂದರೆ ಗ್ರ್ಯಾಂಡ್ ಮಾಸ್ಟರ್​ ಡಿ ಗುಕೇಶ್ (D Gukesh), 11ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಭಾರತೀಯ ಚೆಸ್ ಪಟುಗಳು ಮೇಲುಗೈ ಸಾಧಿಸಿದ್ದಾರೆ. ಬಲ್ಗೇರಿಯಾದ ನುರ್ಗ್ಯುಲ್​ ಸಾವಿಮೋವಾ ಅವರನ್ನು ಕೊನೇರು ಹಂಪಿ ಸೋಲುಣಿಸಿದರು. ಮತ್ತೊಬ್ಬ ಭಾರತೀಯರಾದ ವೈಶಾಲಿ ರಮೇಶ್ ಬಾಬು ಅವರು ರಷ್ಯಾದ ಅಲೆಕ್ಸಾಂಡ್ರಾ ಗೊರಿಯಾಚ್ಕಿನಾ ಎದುರು ಜಯದ ನಗೆ ಬೀರಿದರು....